ಪತಿಯ ಎದುರೇ, ಮಹಿಳೆ ಮೇಲೆ ಗ್ಯಾಂಗ್ ರೇಪ್

Public TV
1 Min Read

ರಾಂಚಿ: ಪತಿಯ (Husband) ಎದುರೇ ಮಹಿಳೆಯ (Woman) ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‍ದಲ್ಲಿ ನಡೆದಿದೆ.

ಜಾರ್ಖಂಡ್‍ನ (Jharkhand) ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯು ತನ್ನ ಅತ್ತೆಯ ಮನೆಯಲ್ಲಿ ಜಗಳವಾಡಿ ಕಾಲ್ನಡಿಗೆ ಮೂಲಕ ಪಕ್ಕದ ಊರಲ್ಲಿರುವ ತಂದೆ ಮನೆಗೆ ಹೋಗುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಹುಡುಕುತ್ತಾ ಆಕೆಯ ಪತಿ ಹಾಗೂ ಅವರ ಸಂಬಂಧಿ ಬೈಕ್‍ನಲ್ಲಿ (Bike) ಹೊರಟರು. ಈ ವೇಳೆ ಆ ಮಹಿಳೆ ರಸ್ತೆಯಲ್ಲಿ ಸಿಕ್ಕಿದ್ದಾಳೆ.

rape

ಇದರಿಂದಾಗಿ ಆಕೆಯ ಪತಿ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದೇ ವೇಳೆ ಬಂದ 6 ಜನರು ಮಹಿಳೆಯ ಪತಿ ಹಾಗೂ ಆಕೆಯ ಸಂಬಂಧಿಯನ್ನು ಥಳಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದರು. ಇದನ್ನೂ ಓದಿ: ಹೊಟ್ಟೆ ಕ್ಯಾನ್ಸರ್‌ ರೋಗದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು

arrested new

ಜೊತೆಗೆ ತೀವ್ರ ಗಾಯಗೊಂಡ ಸಂಬಂಧಿಯನ್ನು ಹಾಗೂ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಲಾಯಕ್ ಆಗಿರೋರೇ ಕಾಂಗ್ರೆಸ್‌ನಲ್ಲಿರೋರು: ಸಿ.ಟಿ ರವಿ

Live Tv
[brid partner=56869869 player=32851 video=960834 autoplay=true]

Share This Article