– ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದ್ದರೆ, ಬಹುತೇಕ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಮಡಿಕೇರಿಯ ರೆಡ್ಡಿ ಬಿಲ್ಡಿಂಗ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಜಾರ್ಖಂಡ್ ಮೂಲದ 150 ಕಾರ್ಮಿಕರ ಪೈಕಿ 57 ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ 57 ಸೋಂಕಿತರ ಪೈಕಿ ಮೂವರು ಸೋಂಕಿತರು ಐಸೋಲೇಷನ್ ಸ್ಥಳದಿಂದ ಪರಾರಿಯಾಗಿದ್ದಾರೆ.
Advertisement
24 ವರ್ಷದ ಇಬ್ಬರು ಮತ್ತು 19 ವರ್ಷದ ಒಬ್ಬ ಯುವಕ ಪರಾರಿಯಾಗಿದ್ದಾನೆ. 57 ಕಾರ್ಮಿಕರಿಗೆ ಮೊನ್ನೆಯಷ್ಟೇ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ 57 ಸೋಂಕಿತರ ಪೈಕಿ ಮೂವರು ಸೋಂಕಿತರು ಮತ್ತು ಏಳು ಪ್ರಾಥಮಿಕ ಸಂಪರ್ಕಿತರು ತಡರಾತ್ರಿ ಐಸೋಲೇಷನ್ ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಟಿಎಚ್‍ಒ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಿದ ಸೋಂಕಿತರೆಲ್ಲರೂ ಅದೇ ಕಟ್ಟಡದಲ್ಲಿ ಐಸೋಲೇಷನ್ ಆಗಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದೆ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರನ್ನು ಸರಿಯಾಗಿ ನೋಡಿಕೊಳ್ಳುವಂತೆ ಕಟ್ಟಡದ ಮಾಲೀಕರಿಗೆ ತಿಳಿಸಲಾಗಿತ್ತು. ಆದರೆ ತಡರಾತ್ರಿ ಮೂವರು ಸೋಂಕಿತರು ಮತ್ತು ಏಳು ಪ್ರಾಥಮಿಕ ಸಂಪರ್ಕಿತರು ಪರಾರಿಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್
ಪರಾರಿಯಾಗಿರುವ ಸೋಂಕಿತರು ಮತ್ತು ಸೋಂಕಿತರನ್ನು ಸರಿಯಾಗಿ ರಕ್ಷಣೆ ಮಾಡದ ಕಟ್ಟಡ ಮಾಲೀಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಪೊಲೀಸರು ಸೋಂಕಿತರು ಮತ್ತು ಪ್ರಾಥಮಿಕ ಸೋಂಕಿತರನ್ನು ಪತ್ತೆಹಚ್ಚಲಿದ್ದಾರೆ ಎಂದಿದ್ದಾರೆ. ಪರಾರಿಯಾಗಿರುವ ಸೋಂಕಿತರಲ್ಲಿ ಒಬ್ಬ ಪುತ್ತೂರಿನಲ್ಲಿರುವ ಮಾಹಿತಿ ದೊರೆತ್ತಿದ್ದು, ಉಳಿದವರ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.