ಬಿಗ್ ಬಾಸ್ ಮನೆಯಿಂದ ಈ ವಾರ ಸ್ಪರ್ಧಿ ಜಾನ್ವಿ (Jhanvi) ಎಲಿಮನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿದ್ದಾಗ ಅಶ್ವಿನಿ ಗೌಡ (Ashwini Gowda) ಜೊತೆ ಹೆಚ್ಚು ಆಪ್ತರಾಗಿದ್ದ ಜಾನ್ವಿ ಉಳಿದ ಸ್ಪರ್ಧಿಗಳೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಇದೀಗ ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದ ಬಳಿಕ ಸ್ಪರ್ಧಿಗಳಲ್ಲಿ ಯಾರೊಂದಿಗೆ ಸ್ನೇಹ ಮುಂದುವರೆಸಲು ಇಷ್ಟ ಪಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಅಶ್ವಿನಿ ಗೌಡ ಹಾಗೂ ಸುಧಿ ಜೊತೆ ಸ್ನೇಹ ಮುಂದುವರೆಸುವ ಭರವಸೆ ಹೊಂದಿರುವುದಾಗಿ ಜಾನ್ವಿ ಹೇಳಿದ್ದಾರೆ. ಈ ವೇಳೆ ಸ್ನೇಹ, ಸ್ನೇಹಿತರ ಕುರಿತು ಮಾತನಾಡಿರುವ ಜಾನ್ವಿ, ‘ಜೊತೇಲಿ ಇದ್ಕೊಂಡು ಬೆನ್ನಿಗೆ ಚೂರಿ ಹಾಕೋವ್ರೇ ಜಾಸ್ತಿ. ಹೀಗಾಗಿ, ಜಾಸ್ತಿ ಯಾರನ್ನೂ ನಂಬಲ್ಲ. ನನಗೆ ಹೆಚ್ಚು ಸ್ನೇಹಿತರೂ ಬೇಕಾಗಿಲ್ಲ. ಈಗಲೂ ಇಬ್ಬರು ಮಾತ್ರ ಬೆಸ್ಟ್ ಫ್ರೆಂಡ್ಸ್ ಇರೋದು. ಸ್ನೇಹದಲ್ಲಿ ಕೆಲವು ಕೆಟ್ಟ ಅನುಭವಗಳಿಂದ ಪಾಠ ಕಲಿತಿದಿದ್ದೇನೆ’ ಎಂದಿದ್ದಾರೆ. ಇದನ್ನೂ ಓದಿ: ಗಿಲ್ಲಿ ನಟ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಟೀಸರ್ ಬಿಡುಗಡೆ!
ಬಿಗ್ ಬಾಸ್ ಮನೆಯಲ್ಲಿ ಕೇವಲ ಅಶ್ವಿನಿ ಗೌಡ ಜೊತೆ ಮಾತ್ರವೇ ಫ್ರೆಂಡ್‌ಶಿಪ್ ಮಾಡಿದ್ದನ್ನ ಜಾನ್ವಿ ಪುತ್ರ ಕೂಡ ವಿರೋಧಿಸಿದ್ರು. ಎಲ್ಲರೊಂದಿಗೂ ಫ್ರೆಂಡ್‌ಶಿಪ್ ಮಾಡಬಹುದಿತ್ತು ಅನ್ನೋದಾಗಿ ಜಾನ್ವಿ ಎಲಿಮಿನೇಟ್ ಆಗಿ ಹೊರಬಂದ ವೇಳೆ ಕಿಚ್ಚನ ಪ್ರಶ್ನೆಗೆ ಜಾನ್ವಿ ಪುತ್ರ ಉತ್ತರಿಸಿದ್ದರು. ಈ ವಿಚಾರಕ್ಕೂ ಸ್ಪಷ್ಟನೆ ನೀಡಿರುವ ಬಿಗ್ ಬಾಸ್ ಸ್ಪರ್ಧಿ ಜಾನ್ವಿ, ‘ನಾನು ಇರೋದೇ ಹೀಗೆ. ಎಲ್ಲರೊಂದಿಗೆ ಸ್ನೇಹ ಮಾಡಲು ಬಯಸುವುದಿಲ್ಲ. ನಾನು ಬಾರ್ಡರ್ ಹಾಕಿಕೊಂಡಿದ್ದೇನೆ. ಹೀಗಾಗಿ, ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಅಶ್ವಿನಿ ಹಾಗೂ ಸುಧಿ ಜೊತೆ ಮಾತ್ರವೇ ಸ್ನೇಹ ಮುಂದುವರೆಯುವ ಸಾಧ್ಯತೆ ಇದೆ’ ಎಂದಿದ್ದಾರೆ.

