25 ದಿನಗಳ ಕಾಲ ಜೆಟ್‌ಲ್ಯಾಗ್ ಬಾರ್‌ ಲೈಸೆನ್ಸ್‌ ಕ್ಯಾನ್ಸಲ್‌

Public TV
1 Min Read
JETLAG

ಬೆಂಗಳೂರು: ಕಾಟೇರ ಸಿನಿಮಾದ ಗೆಲುವಿಗಾಗಿ ಜೆಟ್‌ಲ್ಯಾಗ್ ಪಬ್ (Jetlag Bar and Grill) ಅವಧಿ ಮೀರಿ ಓಪನ್ ಮಾಡಿದ್ರಿಂದ 25 ದಿನಗಳ ಕಾಲ ಲೈಸೆನ್ಸ್ ಸಸ್ಪೆಂಡ್ ಮಾಡಲಾಗಿದೆ. ‌ ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ಆದೇಶ ಹೊರಬಂದಿದೆ.

ಅಬಕಾರಿ ಇಲಾಖೆ (Excise Department) ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 25 ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಲಾಗಿದೆ. ಜನವರಿ 3ರಂದು ಅವಧಿ ಮೀರಿ ರೆಸ್ಟೋಬಾರ್ ಓಪನ್ ಮಾಡಲಾಗಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಮಣ್ಯ ನಗರ ಪೊಲೀಸರು, ಅಬಕಾರಿ ನಿಯಮ ಉಲ್ಲಂಘನೆ ಬಗ್ಗೆಯೂ ಎಫ್ಐಆರ್ (FIR) ನಲ್ಲಿ ಉಲ್ಲೇಖಿಸಿದ್ರು.

ಮೂರು ಬಾರಿ ನಿಯಮ ಉಲ್ಲಂಘಿಸಿದ್ರೆ ಲೈಸೆನ್ಸ್ ರದ್ದು ಮಾಡಲಾಗುತ್ತೆ. ಬ್ರೀಚಿಂಗ್ ಆಫ್ ಎಕ್ಸೈಸ್ ಲಾ ಅಡಿ ಲೈಸೆನ್ಸ್ ರದ್ದು ಮಾಡಲಾಗಿದ್ದು, ಸದ್ಯ ಮೊದಲ ಬಾರಿ ಜೆಟ್‌ಲ್ಯಾಗ್ ವಿರುದ್ಧ ಕಂಪ್ಲೆಂಟ್ ಆಗಿರೋ ಹಿನ್ನೆಲೆಯಲ್ಲಿ 25 ದಿನಗಳ ಕಾಲ ಲೈಸೆನ್ಸ್ ಸಸ್ಪೆಂಡ್ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಇದನ್ನೂ ಓದಿ: 200 ಕೋಟಿ ಕ್ಲಬ್ ಸಮೀಪಕ್ಕೆ ಕಾಟೇರ: ಪೋಸ್ಟರ್ ಹಂಚಿಕೊಂಡ ಫ್ಯಾನ್ಸ್

Share This Article