ನವದೆಹಲಿ: ಜೆಟ್ ಏರ್‍ವೇಸ್ ಕಂಪೆನಿಯ ಇಬ್ಬರು ಪೈಲಟ್ ಗಳು ಪ್ರಯಾಣದಲ್ಲೇ ಹೊಡೆದಾಡಿಕೊಂಡ ವಿಚಿತ್ರ ಘಟನೆಯೊಂದು ಹೊಸ ವರ್ಷದಂದು ನಡೆದಿದೆ.
ಜನವರಿ ಒಂದರಂದು ಜೆಟ್ ಏರ್‍ವೇಸ್ ವಿಮಾನ ಲಂಡನ್ ನಿಂದ ಮುಂಬೈಗೆ ತನ್ನ 9 ಗಂಟೆಯ ಸುದೀರ್ಘ ಪ್ರಯಾಣವನ್ನು ಆರಂಭಿಸಿತ್ತು. ವಿಮಾನ ಪ್ರಯಾಣ ಆರಂಭಿಸಿದಾಗ ಕ್ಯಾಪ್ಟನ್ ಮತ್ತು ಮಹಿಳಾ ಸಹ ಪೈಲಟ್ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಕ್ಯಾಪ್ಟನ್ ತನ್ನ ಮಹಿಳಾ ಸಹದ್ಯೋಗಿಯ ಕಪಾಳಕ್ಕೆ ಹೊಡೆದಿದ್ದಾನೆ.
Advertisement
ಕೂಡಲೇ ಮಹಿಳಾ ಪೈಲಟ್ ಕಾಕ್‍ಪಿಟ್ (ಪೈಲಟ್ ಗಳು ಕೂರುವ ಸ್ಥಳ)ನಿಂದ ಕಣ್ಣೀರು ಹಾಕುತ್ತಾ ಹೊರ ಬಂದಿದ್ದಾರೆ. ಕಾಕ್‍ಪಿಟ್ ನಿಂದ ಪೈಲಟ್ ಹೊರ ಬಂದಿದ್ದನ್ನು ನೋಡಿದ ಪ್ರಯಾಣಿಕರು ಒಂದು ಕ್ಷಣ ಭಯಗೊಂಡು ಆತಂಕಕ್ಕೆ ಒಳಗಾಗಿದ್ದರು.
Advertisement
Advertisement
ಮಹಿಳಾ ಪೈಲಟ್ ಕೂಡಲೇ ವಿಮಾನದಲ್ಲಿದ್ದ 324 ಪ್ರಯಾಣಿಕರ ಹಿತ ದೃಷ್ಟಿಯಿಂದ ಕಾಕ್‍ಪಿಟ್ ನಲ್ಲಿ ಹೋಗಿ ಕುಳಿತಿದ್ದಾರೆ. ಈ ವೇಳೆ ಪೈಲಟ್ ಗಳಿಬ್ಬರ ನಡುವೆ ತಪ್ಪುಗ್ರಹಿಕೆಯಿಂದಾಗಿ ಜಗಳ ನಡೆದಿದೆ. ಮಹಿಳಾ ಪೈಲಟ್ ಮೇಲೆ ಹಲ್ಲೆ ನಡೆಸಿರುವುದು ಕಂಪೆನಿಯ ಕಾನೂನಿಗೆ ವಿರುದ್ಧವಾಗಿದೆ. ಈಗಾಗಲೇ ಹಲ್ಲೆಗೈದ ಪೈಲಟ್ ಲೈಸನ್ಸ್ ನ್ನು ರದ್ದು ಮಾಡಲಾಗಿದೆ. ಒಂದು ವೇಳೆ ಹಲ್ಲೆಗೊಳಗಾದ ಮಹಿಳಾ ಪೈಲಟ್ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಇಚ್ಚಿಸಿದ್ರೆ ನಮ್ಮ ಬೆಂಬಲವಿರಲಿದೆ ಎಂದು ಜೆಟ್ ಏರ್‍ವೇಸ್ ಹೇಳಿದೆ.
Advertisement
ಇಬ್ಬರು ಮಕ್ಕಳು, 324 ಪ್ರಯಾಣಿಕರು ಮತ್ತು 14 ಜನ ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅಳುತ್ತಾ ಹೊರ ಬಂದ ಮಹಿಳಾ ಪೈಲಟ್ ನ್ನು ವಿಮಾನ ಸಿಬ್ಬಂದಿ ಸಮಾಧಾನಪಡಿಸಿ ಕಾಕ್‍ಪಿಟ್ ನತ್ತ ಕಳುಹಿಸಿದ್ದಾರೆ. ವಿಮಾನ ಸುರಕ್ಷಿತವಾಗಿ ಮುಂಬೈ ನಗರವನ್ನು ತಲುಪಿದ್ದು, ಈ ಸಂಬಂಧ ಪ್ರಯಾಣಿಕರಿಂದ ಯಾವುದೇ ದೂರುಗಳು ಬಂದಿಲ್ಲ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜೆಟ್ ಏರ್‍ವೇಸ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ(ಡಿಜಿಸಿಎ) ಸೂಚಿಸಿದ್ದಾರೆ. ಡಿಜಿಸಿಎ ಈ ಪ್ರಕರಣದ ತನಿಖೆ ಆದೇಶಿಸಿದೆ.