ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಸೆಲ್ಫಿ ತೆಗೆದುಕೊಂಡ ಕಾರಣ ಜೆಟ್ ವಿಮಾನಯಾನ ಸಂಸ್ಥೆಯೂ ತನ್ನ ನಾಲ್ವರು ತರಬೇತಿ ನಿರತ ಪೈಲಟ್‍ಗಳನ್ನು ಅಮಾನತುಗೊಳಿಸಿದೆ.
ಜೆಟ್ ವಿಮಾನಯಾನ ಅಮಾನತು ಮಾಡಿದವರಲ್ಲಿ ಒಬ್ಬರು ಹಿರಿಯ ಅಧಿಕಾರಿಯೂ ಸೇರಿದ್ದು, ಇವರೊಂದಿಗಿದ್ದ ಮೂವರು ತರಬೇತಿ ಪೈಲಟ್‍ಗಳು ಸಹ ಅಮಾನತುಗೊಂಡಿದ್ದಾರೆ.
Advertisement
Jet Airways has grounded four of its pilots a senior instructor level commander and three trainee pilots for allegedly clicking selfies
on a training flight(which is without passengers) from Leh to Delhi on April 19. Internal investigation being conducted by the airline
— ANI (@ANI) May 30, 2018
Advertisement
ಏಪ್ರಿಲ್ 19 ರಂದು ಲೇಹ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ರಹಿತ ವಿಮಾನದಲ್ಲಿ ಘಟನೆ ನಡೆದಿದ್ದು, ಸಂಸ್ಥೆ ಆಂತರಿಕ ತನಿಖೆಗೆ ಅದೇಶ ನೀಡಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಟ್ ಸಂಸ್ಥೆಯೂ ಗ್ರಾಹಕರ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದ್ದು, ನಮ್ಮ ಸಂಸ್ಥೆಯೂ ನಾಲ್ಕು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿತ್ತು. ಆದರೆ ಈ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.