ಹಾಸನ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಜೆಡಿಎಸ್ (JDS) ಸೆಳೆಯೋಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ.
ಜೆಡಿಎಸ್‍ನ (JDS) ಪ್ರಭಾವಿ 50 ನಾಯಕರನ್ನು ಕರೆತನ್ನಿ ಅಂತ ಸಿಎಂ ಡಿನ್ನರ್ ಪಾರ್ಟಿಯಲ್ಲಿ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‍ನ ಬಲವಂತಕ್ಕೆ ಯಾರೂ ಪಕ್ಷ ತೊರೆಯಲ್ಲ. ಶರಣಗೌಡ ಕಂದಕೂರು ಗೊಂದಲವನ್ನು ಸರಿಪಡಿಸುತ್ತೇನೆ ಅಂದಿರೋ ಕುಮಾರಸ್ವಾಮಿ, ಕಾಂಗ್ರೆಸ್‍ನಿಂದ 50 ಶಾಸಕರು ಬಿಜೆಪಿ ಹೋಗ್ತಾರೆ ಅಂತ ಸರ್ಕಾರಕ್ಕೆ ಇಂಟೆಲಿಜನ್ಸ್ ಮಾಹಿತಿ ಬಂದಿದೆ. ಅದನ್ನು ತಡೆಯೋಕೆ ಸರ್ಕಾರ ಕಸರತ್ತು ಆರಂಭಿಸಿದೆ ಅಂತ ಹೇಳಿದ್ದಾರೆ.
ಸಭೆಗೆ ಗೈರಾದ ಬಗ್ಗೆ ಶರಣಗೌಡ ಕಂದಕೂರು ಸ್ಪಷ್ಟನೆ ಕೊಟ್ಟಿದ್ದು, ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧ ಇದೆ. ನಾನು ಸಭೆಗೆ ಬರಲ್ಲ ಅಂತ ಹೇಳಿಯೂ ಇಲ್ಲ. ಕಮಿಟಿ ಸಭೆ ಇರುವುದರಿಂದ ಹೋಗಿಲ್ಲ ಅಷ್ಟೆ ಅಂದ್ರು. ಜೆಡಿಎಸ್ ಶಾಸಕರೆಲ್ಲಾ ಹಾಸನಾಂಬೆ ಮುಂದೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಜಿಟಿಡಿ ಮಾತಾಡಿ, ಎಲ್ಲಾ ಶಾಸಕರು ಒಟ್ಟಾಗಿ ಹೋಗಬೇಕು. ಎಚ್‍ಡಿಕೆ ಮತ್ತೊಮ್ಮೆ ಸಿಎಂ ಆಗ್ಬೇಕು ಅಂತ ಪ್ರಾರ್ಥಿಸಿದ್ದೇವೆ ಅಂದರು. ಇದನ್ನೂ ಓದಿ: ಪಾತಾಳಕ್ಕೆ ಹೋಗಿ ಯಾರಾದ್ರು ಬೀಳ್ತಾರಾ?- ಆಪರೇಷನ್ ಕಮಲಕ್ಕೆ ಖಂಡ್ರೆ ವ್ಯಂಗ್ಯ
ಇದಕ್ಕೆ ಸಚಿವ ಚಲುವರಾಯಸ್ವಾಮಿ ಕುಹಕವಾಡಿ, ಯಾರಾದರೂ ಪಕ್ಷ ಬಿಟ್ಟು ಹೋಗ್ತಾರೆ ಅಂತ ಭಯ ಇರಬೇಕು. ಅದಕ್ಕೆ ಹಾಸನಾಂಬೆ ಹತ್ತಿರ ಕಮಿಟ್ ಮಾಡುವ ಪ್ರಯತ್ನ ಮಾಡಿರಬೇಕು. ಕಾಂಗ್ರೆಸ್ಸ್‍ಗೆ ಬರುವವರು ಸಂತೋಷ ಬಲವಂತ ಮಾಡುವ ಪರಿಸ್ಥಿತಿ ಇಲ್ಲ ಅಂತ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.