ಹುಬ್ಬಳ್ಳಿ: `ಮುಸ್ಲಿಂ ವ್ಯಾಪಾರಿಗಳು (Muslim Traders) 5 ತಿಂಗಳು ತಡೆದುಕೊಳ್ಳಿ, ನಂತರ ಈ ದರಿದ್ರಗಳು ಹೋಗ್ತವೆ. ಆಗ ನಮ್ಮದೇ ಸರ್ಕಾರ ಬರುತ್ತದೆ’ ಅಂತಾ ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಬಿಜೆಪಿ ಸರ್ಕಾರವನ್ನ (BJP Government) ಪರೋಕ್ಷವಾಗಿ ದರಿದ್ರ ಎಂದು ಲೇವಡಿ ಮಾಡಿದ್ದಾರೆ.
Advertisement
ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ (Karnataka Elections) ಸಮಯದಲ್ಲಿ ಇದು ಮತಕ್ಕಾಗಿ ಮಾಡ್ತಿರೋದು. ಗೋವಾದಲ್ಲಿ ಏಕೆ ಗೋಹತ್ಯೆ ನಿಷೇಧ ಇಲ್ಲ. ಕರ್ನಾಟಕದಲ್ಲಿ ಮಾತ್ರ ಏಕೆ ಗೋಹತ್ಯೆ ನಿಷೇಧ. ಕರ್ನಾಟಕದಲ್ಲಿ ಏನ್ ಬೇಕಾದರೂ ಗುಂಡಾಗಿರಿ ಮಾಡಬಹುದು ಅನ್ನೋ ಕಾರಣಕ್ಕೆ ಗೋಹತ್ಯೆ ನಿಷೇಧ ಮಾಡಿದ್ದೀರಾ? ಈ ಕಾನೂನು ತಂದಮೇಲೆ ರೈತರ (Farmers) ಆತ್ಮಹತ್ಯೆಯಾಗ್ತಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು
Advertisement
Advertisement
ಇನ್ನೂ ಗಡಿ ವಿಚಾರವಾಗಿ ಮಾತನಾಡುತ್ತಾ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಬಿಜೆಪಿ (BJP) ನಡುವೆ ಕುಸ್ತಿ ನಡೆಯುತ್ತಿದೆ. ಸಿಎಂ ಬೊಮ್ಮಾಯಿ (Basavaraj Bommai) ಈ ವಿಚಾರದಲ್ಲಿ ಹೆಲ್ಪಲೆಸ್ ಆಗಿದ್ದಾರೆ. ಪ್ರತ್ಯೇಕ ಮುಸ್ಲಿಂ ಕಾಲೇಜ್‌ಗೆ (Muslim College) ವಿರೋಧ ವ್ಯಕ್ತಪಡಿಸಿದ ಇಬ್ರಾಹಿಂ ವಕ್ಫ್ ಮಂಡಳಿಗೆ ಪ್ರತೇಕ ಮುಸ್ಲಿಂ ಕಾಲೇಜು ಬೇಡ ಎಲ್ಲಮಕ್ಕಳಿಗೂ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡಿ ವಿವಾದ: ಹೋರಾಟ ಅನ್ನೋದೇ ಆದ್ರೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬರುತ್ತೆ – ಶಿವರಾಜಕುಮಾರ್