ಬೆಂಗಳೂರು: ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾದ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈ ವೇಳೆ ಜೆಡಿಎಸ್ ಪಕ್ಷದ ಸದಸ್ಯ ರಮೇಶ್ ಗೌಡ ಅವರು ಚೆನ್ನಮ್ಮ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ವೀಕರ್ ಮತ್ತೊಮ್ಮೆ ಪ್ರಮಾಣ ವಚನ ನೀಡಿದ್ದಾರೆ.
Advertisement
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಇಬ್ಬರು ನೂತನ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಮಾಣ ವಚನ ಬೋಧನೆ ಮಾಡಿದರು. ಜೆಡಿಎಸ್ ನ ರಮೇಶ್ ಗೌಡ ಹಾಗೂ ಕಾಂಗ್ರೆಸ್ ನ ವೇಣುಗೋಪಾಲ್ ಪರಿಷತ್ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು. ಮೊದಲು ಚೆನ್ನಮ್ಮ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ರಮೇಶ್ ಗೌಡ ಅವರು 2ನೇ ಬಾರಿಗೆ ಸತ್ಯ, ನಿಷ್ಠೆ, ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
Advertisement
ಡಿಸಿಎಂ ಬರೋವರೆಗೂ ಕಾದು ಕುಳಿತ ವೇಣುಗೋಪಾಲ್:
ಜೆಡಿಎಸ್ ಪಕ್ಷದ ಸದಸ್ಯರ ಬಳಿಕ ಪ್ರಮಾಣ ಸ್ವೀಕರಿಸಬೇಕಾಗಿದ್ದ ಕಾಂಗ್ರೆಸ್ ಪಕ್ಷದ ವೇಣುಗೋಪಾಲ್ ಅವರು ಡಿಸಿಎಂ ಪರಮೇಶ್ವರ್ ಅವರು ಬರುವವರೆಗೂ ಪ್ರಮಾಣ ವಚನ ಸ್ವೀಕಾರ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಹೀಗಾಗಿ ಬೆಳಗ್ಗೆ 11 ಗಂಟೆಗೆ ನಡೆಯಬೇಕಾಗಿದ್ದ ಪ್ರಮಾಣ ಸ್ವೀಕಾರ 10 ನಿಮಿಷ ತಡವಾಗಿ ನಡೆಯಿತು. ಸ್ವೀಕರ್ ಬಸವರಾಜ್ ಹೊರಟ್ಟಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡಿ ಡಿಸಿಎಂ ಪರಮೇಶ್ವರ್ ಅವರು ಆಗಮಿಸುವವರೆಗೂ ಕಾದುಕುಳಿತರು. ಪರಮೇಶ್ವರ್ ಆಗಮಿಸಿದ ಬಳಿಕ ವೇಣುಗೋಪಾಲ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv