ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಉಳಿಯುತ್ತೋ, ಉರುಳುತ್ತೋ ಅಂತ ಎಲ್ಲರಿಗೂ ಟೆನ್ಷನ್ ಶುರುವಾಗಿದೆ. ಆದರೆ ಹಾಸನ ಸಂಸದ, ಜೆಡಿಎಸ್ ಪಕ್ಷದ ಯುವನಾಯಕ ಪ್ರಜ್ವಲ್ ರೇವಣ್ಣ ಅವರು ಖಂಡಿತ ಸರ್ಕಾರ ಉಳಿಯತ್ತದೆ. ನಾಳೆ ಕಾದು ನೋಡಿ ಅಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಸಂಸದರು ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟಿಗೆ ಇಂದು ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಎಲ್ಲಾ ಅತೃಪ್ತ ಶಾಸಕರೊಂದಿಗೆ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಫೋನ್ ಮುಖಾಂತರ ಮಾತನಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಎಲ್ಲಾ ಶಾಸಕರು ಸೋಮವಾರ ಸದನಕ್ಕೆ ಆಗಮಿಸುತ್ತಾರೆ. ವಿಶ್ವಾಸ ಮತಯಾಚನೆಯಲ್ಲಿ ನಮಗೆ ಜಯ ಸಿಗಲಿದೆ ಎಂದು ಹೇಳಿದರು.
Advertisement
Advertisement
ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದರು, ಆ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಸೋಮವಾರ ಕಾದು ನೋಡಿ ಎಂದರು.
Advertisement
ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುತ್ತೇವೆ ಎನ್ನುವ ಪ್ರಸ್ತಾಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಹೈಕಮಾಂಡ್ ಹಾಗೂ ಸಿಎಂ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆಲ್ಲಾ ನಾವು ಬದ್ಧವಾಗಿರುತ್ತೇವೆ. ರೆಸಾರ್ಟ್ ರಾಜಕಾರಣ ತಪ್ಪು. ಆದರೆ ಇದಕ್ಕೆಲ್ಲಾ ನೇರ ಕಾರಣ ಬಿಜೆಪಿಯವರೇ. ಅವರ ಆಪರೇಷನ್ ಕಮಲದಿಂದ ನಾವು ರೆಸಾರ್ಟ್ ಸೇರಿದ್ದೇವೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.