ಬೆಂಗಳೂರು: ಆನೆ, ಕಾಡು ಪ್ರಾಣಿಗಳಿಂದ ಮೃತರಾದವರಿಗೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಹಾಸನದಲ್ಲಿ (Hassan) ಆನೆ ಕಾರಿಡಾರ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಹಾಸನ ಜೆಡಿಎಸ್ ಶಾಸಕರು (JDS) ಇಂದು ಪ್ರತಿಭಟನೆ ನಡೆಸಿದರು.
ವಿಧಾನಸೌಧದ (Vidhan Soudha) ಗಾಂಧಿ ಪ್ರತಿಮೆ ಮುಂದೆ ಶಾಸಕರಾದ ಎ.ಟಿ. ರಾಮಸ್ವಾಮಿ (A.T.Ramaswamy), ಹೆಚ್.ಕೆ. ಕುಮಾರಸ್ವಾಮಿ (H.K.Kumaraswamy), ಲಿಂಗೇಶ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಟಿ ರಾಮಸ್ವಾಮಿ, ಆನೆ, ಕಾಡು ಪ್ರಾಣಿ ಹಾವಳಿಯಿಂದ ಬೆಳೆ ಹಾನಿಯಾಗಿದೆ. ಆನೆ ದಾಳಿಯಿಂದ ಜನರು ಸತ್ತಿದ್ದಾರೆ. ಸದನದಲ್ಲಿ ಸಿಎಂ ಅವರು ಕಾಡು ಪ್ರಾಣಿ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ಡಬಲ್ ಮಾಡೋದಾಗಿ ಹೇಳಿದ್ರು. ಆದರೆ ಪರಿಹಾರ ಡಬಲ್ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಆನೆಗಳ ಹಾವಳಿ ತಡಗೆ ಕಾರಿಡಾರ್ ನಿರ್ಮಾಣ ಮಾಡಬೇಕು. ಆನೆಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ಆಗಬೇಕು. ಚಿರತೆಗಳು, ಕೋತಿಗಳು, ಕಾಡು ಹಂದಿಗಳಿಂದ ಬೆಳೆ ನಾಶ ಆಗ್ತಿದೆ. ಇದಕ್ಕೆ ಪರಿಹಾರ ಕೊಡಬೇಕು. ಸರ್ಕಾರ ಕೊಟ್ಟ ಮಾತಿನಂತೆ ಪರಿಹಾರ ನೀಡಬೇಕು. ಸಿಎಂ ಕೂಡಲೇ ಕೊಟ್ಟ ಮಾತು ಈಡೇರಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು
Advertisement
Advertisement
ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳಿಂದ ದೊಡ್ಡ ಸಮಸ್ಯೆ ಆಗ್ತಿದೆ. ಕೂಡಲೇ ವೈಜ್ಞಾನಿಕವಾಗಿ ಕಾಡು ಪ್ರಾಣಿ ಕಡಿಮೆ ಮಾಡುವ ಕೆಲಸ ಮಾಡಬೇಕು. ಜನರು ನಮ್ಮ ಮೇಲೆ ಕೋಪ ಮಾಡಿಕೊಳ್ತಿದ್ದಾರೆ. ಸಿಎಂ ಪರಿಹಾರ ಹೆಚ್ಚಳ ಮಾಡೋದಾಗಿ ಹೇಳಿದ್ದಾರೆ. ಇನ್ನು ಆದೇಶ ಆಗಬೇಕು. ಕೂಡಲೇ ಆದೇಶ ಆಗಬೇಕು. ಕೂಡಲೇ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು. ಕಾಡು ಪ್ರಾಣಿ ದಾಳಿಯಿಂದ ಮೃತರಾದವರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.
Advertisement
Advertisement
ಶಾಸಕ ಲಿಂಗೇಶ್ ಮಾತನಾಡಿ, ಕಾಡು ಪ್ರಾಣಿಗಳಿಂದ ಮಕ್ಕಳನ್ನ ಕಳೆದುಕೊಂಡವರಿಗೆ ನೋವು ಗೊತ್ತಿರುತ್ತೆ. ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲವಾ ಅಂತ ಪ್ರಶ್ನೆ ಮಾಡಿದರು. ಕೋಮು ದಾಳಿಯಿಂದ ಸತ್ತವರಿಗೆ 25 ಲಕ್ಷ ರೂ. ಕೊಡ್ತೀರಾ. ಹಾಗೆಯೇ ಆನೆ ದಾಳಿಯಿಂದ ಮೃತರಾದರಿಗೆ 25 ಲಕ್ಷ ಕೊಡಬೇಕು. ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ