BellaryDistrictsKarnatakaLatestMain Post

ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ

ಬಳ್ಳಾರಿ: ಕಾಲುವೆಗೆ ನೀರು ಹರಿಸುವವರಿಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಸಚಿವ ಶ್ರೀರಾಮುಲು (Sriramulu) ಕಾಮಗಾರಿ ಸ್ಥಳದಲ್ಲಿ ಮಲಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ (Protest) ನಡೆಸಿದ ಘಟನೆ ನಡೆದಿದೆ.

ಬಳ್ಳಾರಿ (Ballary) ತಾಲೂಕಿನ ಪಿಡಿ ಹಳ್ಳಿ ಬಳಿ ವೇದಾವತಿಗೆ ಹಾಕಿದ ಮೇಲ್ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಹದಿನೈದು ಹಿನ್ನೆಲೆಯಲ್ಲಿ ನೀರು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿ ಆತಂಕನ ಉಂಟಾಗಿತ್ತು. ಇದರಿಂದಾಗಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.

ದುರಸ್ತಿ ಕಾಯಪೂರ್ಣವಾಗಿ ಮುಗಿಯುವವರೆಗೂ ಅಲ್ಲೇ ವಾಸ್ತವ್ಯ ಹೂಡಲು ಶ್ರೀರಾಮುಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ವೇದಾವತಿ ನದಿ ದಂಡೆಯ ಬಳಿ ಹಾಸಿಗೆಯನ್ನು ಹಾಸಿಕೊಂಡು ಅಲ್ಲೇ ಮಲಗಿದ್ದಾರೆ. ಅದೇ ರೀತಿ ಇಂದು ಕೂಡ ಅಲ್ಲೇ ಸ್ನಾನ ಮಾಡಿ, ತಿಂಡಿ ಸೇವಿಸಿದ್ದಾರೆ. ಇದನ್ನೂ ಓದಿ: ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪೊಲೀಸ್‌ಗೇ ಚಾಕು ಇರಿದ ಕಿಡಿಗೇಡಿಗಳು

ಇನ್ನೂ ಒಟ್ಟಿನಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಾಯಕರ ಜಟಾಪಟಿ ನಡೆಯುತ್ತಿದ್ದು, ರೈತರಿಗೂ ನೀರು ಹರಿಸುವ ವಿಚಾರದಲ್ಲಿ ಶಾಸಕ ನಾಗೇಂದ್ರ , ಸಚಿವ ರಾಮುಲು ಕ್ರೆಡಿಟ್ ವಾರ್‌ಗೆ ಮುಂದಾಗಿದ್ದಾರೆ. ವೇದಾವತಿ ನದಿಗೆ ಅಡ್ಡಲಾಗಿ ಇರುವ ಎಲ್‍ಎಲ್‍ಸಿ ಕಾಲುವೆ ರಿಪೇರಿ ಸ್ಥಳದಲ್ಲಿ ಸಚಿವ ಶ್ರೀರಾಮುಲು ರಾತ್ರಿಯಿಡೀ ವಾಸ್ತವ್ಯ ಹೂಡಿದ್ದಾರೆ. ಅದೇ ಸ್ಥಳದಲ್ಲಿ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರು ಬಂದು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ

Live Tv

Leave a Reply

Your email address will not be published. Required fields are marked *

Back to top button