ರಾಮನಗರ: ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಅಧಿಕಾರಿಗಳಿಗೆ ತಹಶೀಲ್ದಾರ್ ಮುಂದೆಯೇ ಕೆಳಮಟ್ಟದ ಪದಗಳನ್ನು ಬಳಸಿ ಸಭೆಯಲ್ಲಿ ಅವಾಜ್ ಹಾಕಿದ್ದಾರೆ.
ಮಾಗಡಿಯ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಕೆಲ ಕಾರ್ಯಕರ್ತರು ತಹಶೀಲ್ದಾರ್, ಅಧಿಕಾರಿಗಳು ತಮ್ಮ ಕೆಲಸಗಳನ್ನ ಮಾಡಿಕೊಡುತ್ತಿಲ್ಲ. ಸುಮ್ಮನೆ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಗರಂ ಆದ ಶಾಸಕರು ತಹಸೀಲ್ದಾರ್‍ಗೆ ಸ್ಥಳದಲ್ಲೇ ವಾರ್ನಿಂಗ್ ಕೊಟ್ಟು, ಕೆಲಸ ಮಾಡಿಕೊಡದಿದ್ರೆ ಜನರನ್ನ ಕರೆತಂದು ಅವರ ಕೈಯಿಂದಲೇ ಮೆಟ್ಟಿನಲ್ಲಿ ಹೊಡೆಸುತ್ತೇನೆ. ನಾನ್ ಹೊಡೆಯುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ.
Advertisement
Advertisement
ತಹಶೀಲ್ದಾರ್ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟನೆ ನೀಡಿದ್ರೂ ಅಧಿಕಾರದ ದರ್ಪ ಮರೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನಪ್ರತಿನಿಧಿಗಳು ತಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿರಬೇಕು. ಕೈಯಲ್ಲಿ ಅಧಿಕಾರವಿದೆ ಎಂದ ಮಾತ್ರಕ್ಕೆ ಅಧಿಕಾರಿಗಳಿಗೆ ಕೆಳಮಟ್ಟದ ಪದ ಬಳಸೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.