ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

Public TV
2 Min Read
Sudeep with CM

ಕಿಚ್ಚ ಸುದೀಪ್ (Sudeep) ಚುನಾವಣಾ ಅಖಾಡಕ್ಕೆ ಇಳಿದ ಬೆನ್ನಲ್ಲೇ ಅವರ ನಟನೆಯ ಸಿನಿಮಾ, ಜಾಹೀರಾತು, ಪೋಸ್ಟರ್ ಹಾಗೂ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರು ಹಾಗೂ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮುಖ್ಯ ಚುನಾವಣಾ (Election) ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

sudeep basavaraj bommai

ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ‘ಖ್ಯಾತ ಚಲನಚಿತ್ರ ನಟರಾದ ಕಿಚ್ಚ (Kiccha) ಸುದೀಪ್ ಅವರು ಪ್ರಸ್ತುತ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿಯುವುದು ಮತ್ತು ಇವರ ಭಾವಚಿತ್ರವಿರುವ ಪೋಸ್ಟರ್ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದಿದೆ.

Kichcha Sudeepa

ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ವಕೀಲರೊಬ್ಬರು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಸುದೀಪ್ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಾಗಿ ತಿಳಿಸಿದ್ದರಿಂದ, ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

sudeep 2

ವಕೀಲರು ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ‘ಕನ್ನಡದ ಚಲನಚಿತ್ರ ನಟ ಕಿಚ್ಚ  ಸುದೀಪ್  ಅವರು ಭಾರತೀಯ ಜನತಾ  ಪಕ್ಷದ  ಸ್ಟಾರ್ ಪ್ರಚಾರಕರಾಗಿರುವುದರಿಂದ  ಚುನಾವಣೆ ಮುಗಿಯುವವರೆಗೂ ಅವರ ನಟನೆಯ  ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು  ಟಿವಿಗಳಲ್ಲಿ  ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ  ಟಿವಿಶೋಗಳು  ಪ್ರಸಾರವಾಗದಂತೆ  ಮತ್ತು  ಅವರು ನಟಿಸಿರುವ  ಜಾಹೀರಾತುಗಳು ಸಹ ಪ್ರಸಾರವಾಗದಂತೆ  ಚುನಾವಣಾ ಆಯೋಗ  ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು’ ಎಂದು ಬರೆದಿದ್ದರು.

Sudeep

ಅಲ್ಲದೇ, ‘ಅವರು  ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ  ಅವರ  ನಟನೆಯ ಚಲನಚಿತ್ರಗಳು  ಮತ್ತು  ಟಿವಿಶೋಗಳು  ಹಾಗೂ ಜಾಹೀರಾತುಗಳು  ಮತದಾರರ  ಮೇಲೆ   ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ.  ಆದ್ದರಿಂದ ತಕ್ಷದಿಂದ ಚುನಾವಣಾ ಆಯೋಗ  ಈ ವಿಷಯಕ್ಕೆ  ಸಂಬಂದಿಸಿದಂತೆ  ತುರ್ತು ಕ್ರಮ ಜರುಗಿಸಬೇಕೆಂದು ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ  ಒತ್ತಾಯಿಸುತ್ತಿದ್ದೇನೆ’ ಎಂದು ಕೆ.ಪಿ ಶ್ರೀಪಾಲ್ ಪತ್ರ ನೀಡಿದ್ದರು.

Share This Article