ಮಂಡ್ಯ: ಜಿಲ್ಲೆಯ ಕೆಆರ್ ಪೇಟೆಯಲ್ಲಿ (KR Pete) ಪಂಚರತ್ನ ಯಾತ್ರೆಯ (Pancharatna Yatra) ವೇಳೆ ಮುಖಂಡರು ಸ್ಟೀಲ್ ಬಿಂದಿಗೆಗಳನ್ನು (Pots) ಮಹಿಳೆಯರಿಗೆ ಉಡುಗೊರೆ (Gift) ನೀಡಿದ್ದಾರೆ. ಆದರೆ ಗೌರವಯುತವಾಗಿ ಬಿಂದಿಗೆಗಳನ್ನು ನೀಡದೇ ಕಾರ್ಯಕರ್ತರು ಬೇಕಾಬಿಟ್ಟಿ ಜನರತ್ತ ಎಸೆದಿದ್ದಾರೆ. ಜೆಡಿಎಸ್ (JDS) ಕಾರ್ಯಕರ್ತರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Advertisement
ಭಾನುವಾರ ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ. ಇದಕ್ಕೂ ಮುನ್ನ ಹೆಚ್‌ಡಿಕೆಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್
Advertisement
ಪೂರ್ಣ ಕುಂಭ ಸ್ವಾಗತಕ್ಕಾಗಿ ಅಭ್ಯರ್ಥಿ ಮಂಜು ಅವರು 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ ಪೂರ್ಣಕುಂಭ ಸಿದ್ಧತೆಗೆ ಕೇವಲ 1 ಸಾವಿರ ಬಿಂದಿಗೆಗಳನ್ನು ಬಳಸಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜೆಡಿಎಸ್ ಮುಖಂಡರು ಮಹಿಳೆಯರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.
Advertisement
Advertisement
ಬಿಂದಿಗೆಗಳನ್ನು ಗೌರವಯುತವಾಗಿ ನೀಡದೇ ಕಾರ್ಯಕರ್ತರು ಜನರತ್ತ ಎಸೆದಿದ್ದಾರೆ. ಬಿಸ್ಕೆಟ್‌ನಂತೆ ಎಸೆಯುತ್ತಿದ್ದ ಬಿಂದಿಗೆಗಳನ್ನು ಕ್ಯಾಚ್ ಹಿಡಿಯಲು ಜನರು ಕ್ಯಾಂಟರ್ ಹಿಂದೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿಂದಿಗೆ ಎಸೆಯುತ್ತಿರುವ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಬಿಬಿಎಂಪಿ ಎಂಜಿನಿಯರ್‌ಗಳ ಸಂಬಳ ಕಟ್