ಬೆಂಗಳೂರು: ಸಚಿವ ರೇವಣ್ಣ ಅವರು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ವರ್ತನೆಗೆ ತನ್ನದೇ ಪಕ್ಷದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ನೆಲಮಂಗಲದ ಅಡಕಿಮಾರನಹಳ್ಳಿ ಜೆಡಿಎಸ್ ಮುಖಂಡ ಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನೀವು ಜೀವನ ನಡೆಸುತಿದ್ದೀರಾ? ಜನರನ್ನ ಮರೆತರೆ ಜನರು ರೊಚ್ಚಿಗೆದ್ರೆ ಉಳಿಯಲ್ಲ. ಜನರಿಂದ ಜನರಿಗಾಗಿ ನೀವು ಇರೋದು. ಮಾಜಿ ಪ್ರಧಾನಿ ದೇವೆಗೌಡರ ಮಕ್ಕಳಾಗಿ ನಿಮಗೆ ಶೋಭೆಯಲ್ಲ. ಅದೊಂದೇ ವಿಚಾರ ಅಲ್ಲ ಯಾವುದೇ ವಿಚಾರದಲ್ಲಿ ಜನರಿಗೆ ರೇವಣ್ಣ ಸ್ಪಂದಿಸಲ್ಲ ಅಂತ ಸಚಿವ ರೇವಣ್ಣರಿಗೆ ತನ್ನದೇ ಪಕ್ಷದ ಮುಖಂಡರ ನೀತಿ ಪಾಠ ಮಾಡಿದ್ದಾರೆ.
ಸದ್ಯ ಮುಖಂಡರ ನೀತಿ ಪಾಠ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಕ್ಷಕ್ಕೆ ಮುಜುಗರ ಉಂಟಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ
ಏನಿದು ಘಟನೆ?:
ಮಳೆಯ ಆರ್ಭಟದಿಂದ ಕೊಡಗು ಜನರ ಜೀವನ ಸಂಕಷ್ಟಕ್ಕೆ ಸಿಲುಕಿಗೊಂಡಿತ್ತು. ಹೀಗಾಗಿ ಸೂಪರ್ ಸಿಎಂ ಎಂದೇ ಬಿಂಬತರಾಗಿರೀ ಸಚಿವ ರೇವಣ್ಣ ಅವರು ಆಗಸ್ಟ್ 20ರಂದು ಸಂತ್ರಸ್ತರನ್ನು ಭೇಟಿ ಮಾಡಿ ಕಷ್ಟ ಆಲಿಸಲೆಂದು ತೆರಳಿದ್ದರು. ಶನಿವಾರ ರೇವಣ್ಣ ಮತ್ತು ಎ.ಟಿ. ರಾಮಸ್ವಾಮಿ ಅವರು ಹಾಸನ ಜಿಲ್ಲೆಯ ರಾಮನಾಥಪುರದ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ್ದರು. ಆದರೆ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ಸಚಿವ ರೇವಣ್ಣ ಆಹಾರವನ್ನು ಪ್ರಾಣಿಗಳಿಗೆ ಎಸೆಯೋ ರೀತಿ ಬಿಸ್ಕೆಟ್ ಎಸೆದಿದ್ದರು. ರೇವಣ್ಣ ಅವರು ಬಂದಿದ್ದು, ನಮ್ಮ ಕಷ್ಟವನ್ನು ಆಲಿಸುತ್ತಾರೆ ಅಂತಾ ನಿರಾಶ್ರಿತರು ಸಚಿವರನ್ನು ಮುತ್ತಿಕೊಂಡಿದ್ದರು. ಈ ವೇಳೆ ರೇವಣ್ಣ ಸಂತ್ರಸ್ತರಿಗೆ ಕೊಡಲು ಒಂದು ಬಾಕ್ಸ್ ಬಿಸ್ಕೆಟ್ ತಂದಿದ್ದರು. ಅದನ್ನು ಅಮಾನವೀಯತೆಯಿಂದ ಎಸೆದಿದ್ದಾರೆ. ರೇವಣ್ಣ ಅವರು ಬಿಸ್ಕೆಟ್ ಎಸೆಯುತ್ತಿದ್ದರೆ ಪಕ್ಕದಲ್ಲೇ ನಿಂತಿದ್ದ ಎ.ಟಿ ರಾಮಸ್ವಾಮಿ ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ
ಶಿಬಿರದಲ್ಲಿ ಸುಮಾರು 100 ಜನರು ಇದ್ದರು ಅಷ್ಟೇ. ಎಲ್ಲರಿಗೂ ಜಿಲ್ಲಾಧಿಕಾರಿ ಮತ್ತು ತಾಲೂಕು ಸದ್ಯರೆಲ್ಲರೂ ಆಶ್ರಯ ನೀಡಿದ್ದರು. ನಮ್ಮ ಕ್ಷೇತ್ರ ಏನೋ ಬರುಬೇಕು ಎಂದು ಪ್ರಚಾರಕ್ಕಾಗಿ ಮತ್ತು ಕಾಟಚಾರಕ್ಕಾಗಿ ಬಂದು ಬಿಸ್ಕೆಟ್ ಎಸೆದು ಹೋಗಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ರಾಮಸ್ವಾಮಿ ಅವರು ಸುಮ್ಮನೆ ನೋಡುತ್ತಾ ನಿಂತಿದ್ದರು. ರೇವಣ್ಣ ಅವರು ನಡೆ ನಿಜಕ್ಕೂ ಬೇಸರವಾಯಿತು ಎಂದು ಸ್ಥಳೀಯ ಗಣೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದರು. ಇದನ್ನೂ ಓದಿ: ಹಾಸನದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಪ್ಯಾಕ್ ಬಿಸ್ಕೆಟ್ ರವಾನೆ