ಕೊಪ್ಪಳ: ಪಕ್ಷ ಸಂಘಟನೆ ಕೈಬಿಡದಿದ್ರೆ ಕೊಲೆ ಮಾಡುವುದಾಗಿ ಜೆಡಿಎಸ್ ಮುಖಂಡನಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿಗೆ ಅನಾಮಧೇಯ ಪತ್ರ ಬಂದಿದೆ. “ಜೆಡಿಎಸ್ ಪಕ್ಷವನ್ನ ಸಂಘಟಿಸುತ್ತೇನಲೆ. ಪಕ್ಷ ಸಂಘಟಿಸಿ ಜೆಡಿಎಸ್ ಗೆಲ್ಲಿಸುತ್ತೇನಲೆ. ನಿನಗೆ ನಾವೂ ಅನೇಕ ಸಹಿತ ತೊಂದರೆ ಕೊಟ್ಟಋಉ, ಕೊಡುತ್ತಿದ್ದರೂ ಸಹಿತ ಬುದ್ಧಿ ಕಲಿಯದ ನೀನು ಇನ್ನೂ ಪಕ್ಷ ಸಂಘಟನೆ ಮಾಡುತ್ತಿದ್ದೀಯಾ? ಇಲ್ಲಿಗೆ ನೀನು ಪಕ್ಷ ಸಂಘಟನೆ ಮಾಡೋದನ್ನ ಬಿಟ್ಟು ಬಿಡು. ಇಲ್ಲವಾದರೆ ನಿನ್ನ ಮೇಲೆ ವಾಹನ ಹಾಯಿಸಿ ಸಾಯಿಸಿಬಿಡುತ್ತೇವೆ. ನಿನ್ನನ್ನು ಜೀವಸಹಿತ ಬಿಡುವುದಿಲ್ಲ. ಇಲ್ಲಿಗೆ ಬುದ್ಧಿ ಕಲಿತು ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಡು ಹುಷಾರ್” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Advertisement
ಈ ಕುರಿತು ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಹೊಸಮನಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.