ಉಡುಪಿ: ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟರೂ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಪತ್ನಿ ಭವಾನಿ ರೇವಣ್ಣ ಕ್ಯಾರೇ ಎಂದಿಲ್ಲ. ಈ ಸಂಬಂಧ ಎಂಎಲ್‍ಸಿ ಜೆಡಿಎಸ್ ನಾಯಕ ಭೋಜೇಗೌಡ (Bhoje Gowd) ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಭವಾನಿ ರೇವಣ್ಣ ಆಕಾಶದಲ್ಲಿದ್ದಾರಾ ಅಥವಾ ಪಾತಾಳದಲ್ಲಿದ್ದಾರಾ?. ದುರ್ಯೋಧನನ ತರ ವೈಶಂಪಾಯನ ಸರೋವರದಲ್ಲಿ ಮುಳುಗಿ ಕೂತಿದ್ದಾರಾ?. ಭವಾನಿ ರೇವಣ್ಣರನ್ನು (Bhavani Revanna) ಹುಡುಕಿಕೊಂಡು ಬನ್ನಿ ಬೇಡ ಅಂದೋರ್ಯಾರು ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಾನೂನು ಗೊತ್ತಿಲ್ಲವೇ?. ನೋಟಿಸಿಗೆ ಉತ್ತರಿಸದಿದ್ದರೆ ಕಾನೂನು ರೀತಿಯಲ್ಲೇ ಕ್ರಮಕೈಗೊಳ್ಳಿ. ಸರ್ಕಾರ ಮತ್ತು ಎಸ್‍ಐಟಿಯನ್ನು ಅಡಚಣೆ ಮಾಡಿ ತಡೆದವರು ಯಾರು?. ಭವಾನಿ ರೇವಣ್ಣರನ್ನ ಹುಡುಕಿ ಕರೆದುಕೊಂಡು ಬರುವುದು ಕಷ್ಟನಾ?. ರಾಜ್ಯದ ಪೆÇಲೀಸರು ಅಷ್ಟೊಂದು ಅಸಮರ್ಥರಾಗಿದ್ದಾರಾ?. ಸಮನ್ಸ್ ತಿರಸ್ಕರಿಸಿದವರಿಗೆ ಏನು ಕ್ರಮವಾಗುತ್ತದೆ ಅದನ್ನು ಮಾಡಿ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಪದಕಗಳನ್ನು ಪಡೆದ ಅಧಿಕಾರಿಗಳು ನಮ್ಮ ಬಳಿ ಇಲ್ಲವೇ ಎಂದು ಭೋಜೇಗೌಡ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಹಾಸನ ಸಂಸದರು ವಿದೇಶದಿಂದ ವಾಪಸ್ ಬಂದು SIT ತನಿಖೆ ಎದುರಿಸಬೇಕು – ನಿಖಿಲ್ ಕುಮಾರಸ್ವಾಮಿ
Advertisement
Advertisement
ನೋಟಿಸ್ ಕೊಟ್ರೂ ನೋ ಯೂಸ್: ಪ್ರಕರಣದಲ್ಲಿ ಭವಾನಿ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳೋದಕ್ಕಾಗಿ ಎಸ್‍ಐಟಿ ಈಗಾಗಲೇ 2 ನೋಟಿಸ್ ನೀಡಿದೆ. ಆದರೆ ಕೂಡ ಭವಾನಿ ರೇವಣ್ಣ ವಿಚಾರಣೆಗೆ ಬರೋದಿರಲಿ ಎಸ್‍ಐಟಿಯ ಸಂಪರ್ಕಕ್ಕೂ ಸಿಕ್ಕಿಲ್ಲ. ಅನಾರೋಗ್ಯದ ನೆಪದಿಂದ ಇದುವರೆಗೂ ವಿಚಾರಣೆಗೆ ಹಾಜರಾಗಿಯೇ ಇಲ್ಲ. ಇತ್ತ ಅವರ ಕಾರು ಚಾಲಕ ಅಜಿತ್ ಕೂಡ ನಾಪತ್ತೆಯಾಗಿದ್ದು, ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.