ರಾಮನಗರ: ಸಮರ್ಪಕ ವಿದ್ಯುತ್ ಸಂಪರ್ಕ ನೀಡದ್ದಕ್ಕೆ ಜೆಡಿಎಸ್ ಮುಖಂಡರೊಬ್ಬರು ಲೈನ್‍ಮೆನ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ರಾಮನಗರ ತಾಲೂಕಿನ ಮೇರೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮೇರೆಗೌಡನದೊಡ್ಡಿ ಗ್ರಾಮದ ಮಂಜು ಹಲ್ಲೆ ಮಾಡಿದ ಜೆಡಿಎಸ್ ಮುಖಂಡ. ಮಂಜು ಭೈರಮಂಗಲ ಗ್ರಾಮ ಪಂಬಾಯತ್ ಅಧ್ಯಕ್ಷ ರವಿ ಸಹೋದರನಾಗಿದ್ದು, ಲೈನ್‍ಮೆನ್‍ಗಳಾದ ಕಿರಣ್ ಹಾಗೂ ನಾಯಕ ಎಂಬವವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯು ನಾಲ್ಕು ದಿನಗಳ ಹಿಂದೆ ನಡೆದಿದ್ದು, ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಳೆ ಬಿರುಗಾಳಿಯಿಂದಾಗಿ ಜಮೀನುಗಳ ಮೋಟರ್ ಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎರಡೂ ದಿನ ಕಳೆದರೂ ಯಾರೊಬ್ಬರು ಬಂದು ದುರಸ್ತಿಗೊಳಿಸಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಮಂಜು ಅವರು ಬೆಸ್ಕಾಂ ವಾಹವನ್ನು ತಡೆದು ಕಿರಣ್ ಹಾಗೂ ನಾಯಕ ಮೇಲೆ ಹಲ್ಲೆ ಮಾಡಿದ್ದಾರೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೆಡಿಎಸ್ ಮುಖಂಡ ಮಂಜು ಅವರ ವರ್ತನೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.