ತುಮಕೂರು: ಜೆಡಿಎಸ್ ನಿಂದ ಬಾಗಿಲು ಮುಚ್ಚಿದೆ ಎಂದ ಮೇಲೆ ಬೇರೆ ಬಾಗಿಲು ತಟ್ಟಬೇಕಲ್ಲ. ಖಂಡಿತವಾಗಿ ಜೆಡಿಎಸ್ ಬಾಗಿಲು ಮುಚ್ಚಿದ್ದು, ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಸಂಪರ್ಕದಲ್ಲಿ ಇದ್ದೇನೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರುವೇಕೆರೆಯಲ್ಲಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು. ಕುಮಾರಸ್ವಾಮಿ ಎಮ್ ಟಿ ಕೃಷ್ಣಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಇಂಥಹ ಮಾತುಗಳು ನಾವು ಹಿಂದಿನಿಂದಲೂ ನೋಡುತಿದ್ದೇವೆ. ಅವರು ಒಂದೊಂದು ಸಾರಿ ಒಂದೊಂದು ಮಾತು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
Advertisement
Advertisement
ಹೆಚ್‍ಡಿಕೆಗೆ ಈ ಮಾತುಗಳು ಎಷ್ಟು ಶೋಭೆ ತರುತ್ತದೆ ಅನ್ನೋದು ಅವರೇ ಯೋಚನೆ ಮಾಡಲಿ. ಒಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ನಾಯಕರನ್ನು ಬೆಳೆಸೋದು ಅವರಿಗೆ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಜನರ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಲಿ ಶಾಸಕನಿಗೆ ಬಾಗಿಲು ಮುಚ್ಚಿದ ಜೆಡಿಎಸ್ – ದೇವೇಗೌಡರಿಂದ್ಲೇ ಡೋರ್ ಕ್ಲೋಸ್ ಸಂದೇಶ
Advertisement
ಇತ್ತ ಸ್ವಪಕ್ಷದ ವಿರುದ್ಧವೇ ಹೇಳಿಕೊಡುತ್ತಾ ತಮ್ಮ ನಾಯಕರ ವಿರುದ್ಧ ಆಗಾಗ ಗುಡುಗುತ್ತಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್‍ಗೆ ಇಂದಿನಿಂದ ಅಧಿಕೃತವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ. ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ನಾಯಕನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬಾಗಿಲು ಮುಚ್ಚಿದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ತೀರ್ಮಾನಕ್ಕೆ ವರಿಷ್ಠ ದೇವೇಗೌಡರು ಅಧಿಕೃತ ಮೊಹರು ಒತ್ತಿದ್ದಾರೆ. ಈ ನಡುವೆ ಶಾಸಕ ಶ್ರೀನಿವಾಸ್‍ಗೆ ಇತ್ತ ಜೆಡಿಎಸ್ ಇಲ್ಲದೇ, ಅತ್ತ ಕಾಂಗ್ರೆಸ್ ಅಲ್ಲದ ಅತಂತ್ರಭಾವ ಮೂಡಿದೆ.