ಮಂಡ್ಯ: ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಆಮೆ-ಮೊಲದ ಕಥೆಯನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳುವ ಮೂಲಕ ತಿರುಗೇಟು ಕೊಟ್ಟರು.
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಬಿಜೆಪಿ ಸಭೆಯಲ್ಲಿ ಕೆ.ಆರ್.ಪೇಟೆ ಉಪಚುನಾವಣೆ ಘಟನೆ ನೆನೆದ ಅವರು, ನಾರಾಯಣಗೌಡ ಜಾಗದಲ್ಲಿ ನಾನು ಇದ್ದಿದ್ರು ನಾನು ರಾಜೀನಾಮೆ ಕೊಡುತ್ತಿರಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದರು. ಅವರನ್ನು ಗೆಲ್ಲಿಸಬೇಕೆಂದು ನಾವು ಹಗಲಿರುಳು ಶ್ರಮಪಟ್ಟೆವು ಎಂದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಪ್ರಬುದ್ಧ ರಾಜಕಾರಣಿ ಅಲ್ಲ: ಸಿದ್ದರಾಮಯ್ಯ
Advertisement
Advertisement
ಯಡಿಯೂರಪ್ಪ ಅವರು ಒಂದೇ ದಿನ ಎರಡು ಕಡೆ ಪ್ರಚಾರ ಸಭೆ ನಡೆಸಿದ್ರು. ಮತದಾನಕ್ಕೆ ಮೂರ್ನಾಲ್ಕು ದಿನಗಳ ಬಾಕಿ ಇರುವಾಗ ಯಾಕೋ ಸ್ವಲ್ಪ ಕಷ್ಟ ಇದೆ, ಸೋಲುತ್ತೇವೆ ಎನ್ನಿಸುತ್ತೆ ಎಂದು ನಾರಾಯಣಗೌಡ ಅವರಿಗೆ ಕೇಳಿದೆ. ಆದ್ರು ಪರವಾಗಿಲ್ಲ ನಾವು ನಮ್ಮ ಶ್ರಮ ಹಾಕೋಣಾ ಎಂದರು. ಆ ವೇಳೆ ಎಲ್ಲರೂ ಬಿಜೆಪಿ ಎಲ್ಲಿ ಗೆಲ್ಲುತ್ತೇ, ನಾವು ಎಷ್ಟು ಉಪಚುನಾವಣೆ ಮಾಡಿಲ್ಲ ಎಂದಿದ್ದರು ಎಂದು ತಿಳಿಸಿದರು.
Advertisement
ನಾವು ಅದ್ಯಾವುದಕ್ಕೂ ಕಿವಿ ಕೊಡಲಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೆವು. ಜೆಡಿಎಸ್‍ಗೆ ಆಗ ಕೇಡುಗಾಲ ಬಂದಿತ್ತು. ಕೊನೆದಿನದ ಪ್ರಚಾರಕ್ಕೆ ಬರಬೇಕಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಕೈ ಕೊಡ್ತು. ಅವತ್ತು ಜೆಡಿಎಸ್‍ನ ವಿಶ್ವಾಸ ನೋಡಿದ್ರೆ, ನಂಗೆ ಮೊಲ, ಆಮೆಯ ಕಥೆ ನೆನಪಾಗುತ್ತೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಮೊಲ ಆಗಿತ್ತು, ನಾವು ಆಮೆಯಾಗಿದ್ದೋ. ಆಮೆ ರೇಸ್‍ನಲ್ಲಿ ಮುಂದೆ ಹೋದ್ರೆ, ಮೊಲ ನಿದ್ದೆ ಮಾಡ್ತಾ ಇತ್ತು ಎಂದು ವಿವರಿಸಿದರು.
Advertisement
ನಾವು ಆಮೆಯಂತೆ ನಮ್ಮ ಆತ್ಮವಿಶ್ವಾಸ ಬಿಡದೇ ನಮ್ಮ ಕೆಲಸ ಮಾಡಿದೋ. ಮೊದಲ ರೌಂಡ್ ಬಿಟ್ಟರೇ ಉಳಿದ ಎಲ್ಲ ರೌಂಡ್‍ಗಳಲ್ಲೂ ನಮ್ಮ ಅಭ್ಯರ್ಥಿ ಮುನ್ನಡೆ ಸಾಧಿಸಿದರು. ಜೆಡಿಎಸ್‍ನವರು ಮಲಗಿ ಮೇಲೆ ಎದ್ದಿದ್ದು, ಫಲಿತಾಂಶ ಬಂದ ಮೇಲೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಾಗ ಯಡಿಯೂರಪ್ಪ ಅವರು ತುಂಬಾ ಖುಷಿ ಪಟ್ಟರು. ಇಡೀ ರಾಜ್ಯವನ್ನೆ ಗೆದ್ದಷ್ಟು ಖುಷಿ ಅವರ ಮುಖದಲ್ಲಿ ಕಾಣುತ್ತಿತ್ತು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಮ್ರಾನ್ ಖಾನ್‌ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ
ಮಂಡ್ಯದಲ್ಲಿ ಜೆಡಿಎಸ್ ಪುಡಾರಿಗಳ ದಬ್ಬಾಳಿಕೆ ಇದ್ರು ಸಹ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಮಂಡ್ಯ ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಈಗ ಆ ಶ್ರಮದ ಫಲ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಿದೆ. ಕೆಆರ್‌ಪೇಟೆಯಲ್ಲಿ ಆರಂಭವಾಗಿರುವ ವಿಜಯಯಾತ್ರೆ ಮಂಡ್ಯದ ಎಲ್ಲ ಕ್ಷೇತ್ರದಲ್ಲೂ ಆರಂಭವಾಗಬೇಕು ಎಂದು ಹೇಳಿದರು.