ಚಿಕ್ಕಬಳ್ಳಾಪುರ: ಹೈದರಾಬಾದ್ (Hyderabad) ವ್ಯಕ್ತಿಗೆ ಸಹಕರಿಸುವಂತೆ ಪೊಲೀಸರಿಗೆ ಕರೆ ಮಾಡಿದ್ದ ಪ್ರಕರಣ ಸಂಬಂಧ ಸಚಿವ ಜಮೀರ್ ಅಹ್ಮದ್ (Zameer Ahmed) ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ (JDS) ದೂರು ನೀಡಿದೆ.
ರಾಜ್ಯದ ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚನೆಗೈದ ಹೈದರಾಬಾದ್ ಮೂಲದ ಅಕ್ಬರ್ ಬಿನ್ ತಬರ್ ಪರ ಸಚಿವ ಜಮೀರ್ ಅಹ್ಮದ್ ನಿಂತಿದ್ದರು. ಅಲ್ಲದೇ, ಅಕ್ಬರ್ & ಟೀಂಗೆ ಅಲ್ಪಸಂಖ್ಯಾತ ಇಲಾಖೆಯ ವಾಹನ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟಲ್ಲದೇ ಅಕ್ಬರ್ ಮತ್ತು ರೈತರ ನಡುವೆ ರಾಜಿ ಮಾಡುವಂತೆ ಪೊಲೀಸರಿಗೆ ಜಮೀರ್ ಕರೆ ಮಾಡಿದ್ದರು. ಸಚಿವ ಜಮೀರ್ ಅಹ್ಮದ್ ರಾಜಿ ಆಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು. ಹೀಗಾಗಿ, ಅಧಿಕಾರ ದುರುಪಯೋಗ ಮಾಡಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಜೆಡಿಎಸ್ ದೂರು ಕೊಟ್ಟಿದೆ.ಇದನ್ನೂ ಓದಿ: Bihar Election Phase 1 – 20 ವರ್ಷಗಳ ಬಳಿಕ ಶೇ.64.6ರಷ್ಟು ದಾಖಲೆಯ ಮತದಾನ
ಈ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, ಯಾರು ಬೇಕಾದರೂ ರಾಜ್ಯಪಾಲರಿಗೆ ದೂರು ಕೊಡಬಹುದು. ಅದರಲ್ಲಿ ಏನಿದೆ? ನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಯಾರೋ ಒಬ್ಬರು ಬಂದು ಹೀಗೆ ಹಣ ಕೊಡಬೇಕು ಅಂತ ಹೇಳಿದ್ದರು. ನಾನು ಏನ್ ಮಾತಾಡಿದ್ದೀನಿ ಆಡಿಯೋ ಇದೆ ನೋಡಿ. ಹಣ ಕೊಡಬೇಕು. ಆದರೆ ರೈತರು ಹೇಳಿದಷ್ಟು ಅಲ್ಲ. ಕೂತು ಇತ್ಯರ್ಥ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ನೂರಾರು ಜನರು ಬರ್ತಾರೆ. ಸಹಾಯ ಮಾಡಿ ಅಂತ ಮಾಡಿದ್ದೇನೆ. ಇದರಲ್ಲಿ ತಪ್ಪೇನು? ನಮ್ಮ ಇಲಾಖೆಯ ಕಾರು ಬಳಕೆ ಮಾಡಿರೋದು ಸುಳ್ಳು. ಆ ರೀತಿ ಏನು ಇಲ್ಲ. ಕರ್ನಾಟಕದ ಗಾಡಿ ಹೈದರಾಬಾದ್‌ನಲ್ಲಿ ಓಡಾಡೋಕೆ ಆಗುತ್ತಾ? ಯಾರಿಗೂ ಗಾಡಿ ಕೊಟ್ಟಿಲ್ಲ. ಆರೋಪ ಮಾಡೋದು ಸಾಧ್ಯವಿಲ್ಲ. ಸಹಾಯ ಮಾಡಿ ಅಂತ ಕೇಳಿದ್ದರು, ಹೀಗಾಗಿ ಸೆಟಲ್ ಮಾಡಿಕೊಳ್ಳಿ ಅಂತ ಹೇಳಿದ್ದೆ. ಅದರಲ್ಲಿ ಏನಿದೆ ತಪ್ಪು? ಅಂತಾ ಪ್ರಶ್ನಿಸಿದ್ದಾರೆ.

