ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ್ ರಾಜ್ಯಸಭಾ ಟಿಕೆಟ್

Public TV
2 Min Read
ANIL

ಪಾಟ್ನಾ: ಬಿಹಾರದಿಂದ ರಾಜ್ಯಸಭೆಗೆ ಈ ಬಾರಿ ಆಡಳಿತಾರೂಢ ಜೆಡಿಯು ಪಕ್ಷವು ಕನ್ನಡಿಗ ಹಾಗೂ ಉಡುಪಿ ಮೂಲದ ಅನಿಲ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ.

ಮೂಲತಃ ಮಂಗಳೂರಿನವರಾಗಿದ್ದ ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿದ್ದರು. ಮಹೇಂದ್ರ ಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇದೀಗ ಜೆಡಿಯು ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

ಕಳೆದ ವರ್ಷ ಡಿಸೆಂಬರ್ 27 ರಂದು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ್ ಅವರ ನಿಧನದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಹಾರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದೇ ಮೇ 30 ರಂದು ಉಪಚುನಾವಣೆ ನಡೆಯಲಿದೆ.

ರಾಜ್ಯಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 19 ಕೊನೆಯ ದಿನವಾಗಿದೆ. ಮೇ 30ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಬಳಿಕ ಅದೇ ದಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಚಿಕ್ಕಪ್ಪನ ಮದುವೆಗೆ ಬಂದ ಮೂವರು ಬಾಲಕಿಯರು ಮಸಣಕ್ಕೆ

rajya sabha

ಈ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕರೊಬ್ಬರು, ರಾಜ್ಯಸಭಾ ಉಪಚುನಾವಣೆಗೆ ಅನಿಲ್ ಹೆಗ್ಡೆಯವರ ನಾಮಪತ್ರ ಘೋಷಣೆ ಆಶ್ಚರ್ಯ ತಂದಿದೆ. ಇದು ಸಂಘಟನೆ ಮತ್ತು ಪಕ್ಷಕ್ಕಾಗಿ ಮೌನವಾಗಿ ದುಡಿಯುತ್ತಿರುವ ವ್ಯಕ್ತಿಗೆ ಸಿಕ್ಕ ಪ್ರತಿಫಲವಾಗಿದೆ. ಅವರ ಕೊಡುಗೆಯನ್ನು ಜೆಡಿಯು ಗುರುತಿಸಿದೆ. ಅವರು ಬಿಹಾರದಿಂದ ನಾಮನಿರ್ದೇಶಿತರಾಗುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ(ಯು) ಉಪಚುನಾವಣೆಯಲ್ಲಿ ಸ್ಥಾನವನ್ನು ಪಡೆಯಲು ಸಿದ್ಧವಾಗಿದೆ. ಅದಕ್ಕಾಗಿಯೇ ಅನಿಲ್ ಹೆಗ್ಡೆ ಅವರಿಗೆ ಸ್ಥಾನ ನೀಡಿದೆ ಎಂದಿದ್ದಾರೆ. ಇದನ್ನೂ ಓದಿ: ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

ANIL 1 1

ಅನಿಲ್ ಹೆಗ್ಡೆ ಯಾರು?: ಬ್ರಹ್ಮಾವರ ಕೂರ್ಗಿಯರಾದ ಅನಿಲ್ ಹೆಗ್ಡೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಚಿಕ್ಕಪ್ಪನ ಮಗ. ಉಡುಪಿಯಲ್ಲಿ ಪದವಿ ಪಡೆದ ಬಳಿಕ ಹೆಗ್ಡೆ, ಆರಂಭದಲ್ಲಿ ಜನತಾ ಪರಿವಾರದ ನಾಯಕನಾಗಿದ್ದರು. ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರ ಪಾಳಯದಲ್ಲಿದ್ದರು. ಅವರಿಂದಾಗಿ ಜಾರ್ಜ್ ಫರ್ನಾಂಡಿಸ್ ಸಂಪರ್ಕಕ್ಕೆ ಬಂದು, ದಶಕಗಳ ಕಾಲ ಅವರಿ ನೆರಳಾಗಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *