– ಸ್ವಾಮೀಜಿ ಬಳಿ ಪಾನ್ ಕಾರ್ಡ್ ಇಲ್ಲ
ಮುಂಬೈ: ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿರುವ ಜಯಸಿದ್ದೇಶ್ವರ ಸ್ವಾಮೀಜಿ ಒಟ್ಟು 3 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಜಯಸಿದ್ದೇಶ್ವರ ಸ್ವಾಮೀಜಿ ಬಳಿ 6 ಲಕ್ಷ 46 ಸಾವಿರ ನಗದು ಮತ್ತು 2 ಕೋಟಿ 72 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಆದ್ರೆ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ. ಮೀಸಲು ಕ್ಷೇತ್ರವಾಗಿರುವ ಸೋಲಾಪುರದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಸಿಂಧೆ ಮತ್ತು ವಂಚಿತ್ ಬಹುಜನ್ ಅದಾಡಿ (ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಸ್ವಾಮೀಜಿ ಸ್ಪರ್ಧಿಸಿದ್ದಾರೆ.
Advertisement
Advertisement
ಮಹಾರಾಷ್ಟ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಪಾನ್ ಕಾರ್ಡ್ ಹೊಂದಿರದ ಏಕ ಮಾತ್ರ ಅಭ್ಯರ್ಥಿ ಜಯಸಿದ್ದೇಶ್ವರ ಸ್ವಾಮೀಜಿ. ನನಗೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ. ಕಾರಣ ನಾನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
Advertisement
ಅಭ್ಯರ್ಥಿ ಬಳಿ ಪಾನ್ ಕಾರ್ಡ್ ಇಲ್ಲದಿದ್ರೂ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬಹುದು. ರೆಗ್ಯೂಲರ್ ಹಾಗು ನಿಶ್ಚಿತ ಆದಾಯವನ್ನು ಹೊಂದಿರದ ಕಾರಣ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.