ಕನ್ನಡದ ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಮೊದಲನೇ ದಿನವೇ ತಮ್ಮ ಖಾಸಗಿ ಜೀವನದ ಕಥನ ಹೇಳಿಕೊಂಡರು. ಅಫೇರ್ ಇಟ್ಟುಕೊಂಡಿರುವ, ಕದ್ದುಮುಚ್ಚಿ ಮದುವೆ ಆಗಿರುವ, ಡಿವೋರ್ಸ್ ತಗೆದುಕೊಂಡಿರುವ, ಹುಡುಗನಿಂದ ತಮಗಾದ ಅನ್ಯಾಯ, ಹುಡುಗಿಯಿಂದ ತಮಗಾದ ನೋವು ಹೀಗೆ ಎಲ್ಲವನ್ನೂ ಖುಲ್ಲಂ ಖುಲ್ಲಾ ಹಂಚಿಕೊಂಡಿದ್ದರು. ಈಗ ಆ ನೋವುಗಳು ಅವರ ಬದುಕಿಗೆ ಬೆಳಕಾದಂತೆ ಕಾಣುತ್ತಿವೆ.
ನಟಿ, ಮಾಡಲ್ ಜಯಶ್ರೀ ಆರಾಧ್ಯ, ತಾವು ಮದುವೆ ಆಗಿರುವ ಹುಡುಗನ ಜೊತೆ ಅಫೇರ್ ಇಟ್ಟುಕೊಂಡಿದ್ದ ವಿಷಯವನ್ನು ಹಂಚಿಕೊಂಡಿದ್ದರು. ಅಲ್ಲದೇ, ಇದೀಗ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದರು. ಈಗ ಮನೆಯಿಂದ ಹೊರ ಬಂದ ತಕ್ಷಣವೇ ತಾವು ಇಷ್ಟಪಟ್ಟ ಹುಡುಗನ ಜೊತೆ ರೆಜಿಸ್ಟರ್ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ. ಮನೆಯಿಂದ ಆಚೆ ಹೋದ ತಕ್ಷಣ ತಾವು ಮಾಡುವ ಮೊದಲ ಕೆಲಸವದು ಎಂದು ಸಹ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್
ಬಿಗ್ ಬಾಸ್ ಮನೆಗೆ ಬರುವ ಮುನ್ನ ಜಯಶ್ರೀ ಪ್ರೀತಿಸುತ್ತಿದ್ದ ಹುಡುಗ, ಮದುವೆ ಆಗಲು ಕೇಳಿಕೊಂಡನಂತೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಜಯಶ್ರೀ ಬದಲಾಗುತ್ತಾರೆ ಎನ್ನುವ ಅಪನಂಬಿಕೆ ಅವನದ್ದಾಗಿತ್ತಂತೆ. ಆದರೆ, ನಾನು ಬದಲಾಗಿಲ್ಲ. ಮನೆಯಿಂದ ಹೊರ ಹೋದ ತಕ್ಷಣವೇ ಅದೇ ಹುಡುಗನ ಜೊತೆ ಹೊಸ ಬದುಕಿಗೆ ಕಾಲಿಡುವುದಾಗಿ ಅವರು ಹೇಳಿದ್ದಾರೆ.