ಬೆಂಗಳೂರು: ಅಂಬರೀಶ್ ನನ್ನನ್ನು ಬಾರೋ ಹೋಗೋ ಅಂತಾ ಕರೆಯುತ್ತಿದ್ದರು ಎಂದು ಹಿರಿಯ ನಟಿ ಜಯಂತಿ ಕಣ್ಣೀರಿಟ್ಟಿದ್ದಾರೆ.
ಅಂಬರೀಶ್ ಅವರನ್ನು ನಾನು ಎಂದು ಅವರು, ಇವರು ಅಂತಾ ಕರೆಯಲಿಲ್ಲ. ನಮ್ಮದು 40 ವರ್ಷಗಳ ಸ್ನೇಹ. ಅವಸರ ಮಾಡಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ಇಷ್ಟು ಬೇಗ ಹೋಗಿದ್ದಕ್ಕೆ ನನಗೆ ನೋವಾಗಿದೆ. ಇಡೀ ಕರುನಾಡಿನ ಜನತೆ ಅಂಬರೀಶ್ ನಿಧನಕ್ಕೆ ಕಣ್ಣೀರು ಹಾಕುತ್ತಿದೆ. ಆರೋಗ್ಯದ ಗಮನ ಕೊಡಬೇಕು ಅಂತಾ ಕುಟುಂಬಸ್ಥರು ಹೇಳುತ್ತಿದ್ದರು. ಆದ್ರೂ ಅಂಬರೀಶ್ ಆರೋಗ್ಯದ ಬಗ್ಗೆ ಕಾಳಜಿ ನೀಡಲಿಲ್ಲ. ಕುಟುಂಬಸ್ಥರಿಗೆ ಚಾಮುಂಡೇಶ್ವರಿ ತಾಯಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಯಂತಿ ಅವರು ಪ್ರಾರ್ಥಿಸಿದರು.
ಇದೇ ವೇಳೆ ಮಾತನಾಡಿದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಏನೇ ಸಮಸ್ಯೆ ಬಂದರೂ ಅಂಬಿ ಅಣ್ಣ ನಮ್ಮ ಹಿಂದೆ ಇದ್ದಾರೆ ಎಂಬ ಧೈರ್ಯವಿತ್ತು. ಚಿತ್ರರಂಗಕ್ಕೆ ದೊಡ್ಡ ಆಧಾರಸ್ಥಂಭ ಆಗಿದ್ದರು. ಪ್ರೀತಿಯಿಂದು ಬೈದು ಬುದ್ಧಿ ಹೇಳುತ್ತಿದ್ದರು. ಅವರಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಅಣ್ಣನನ್ನು ನಾವು ಇಂದು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಿ ಭಾವುಕರಾದರು.
https://youtu.be/Bkld1mGV-uQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv