ಬೆಳಗಾವಿ: ಇಂದು 29ನೇ ದಿವಸಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನ ಕಾಲಿಟ್ಟಿದೆ ಎಂದು ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಧ್ವನಿ ಎತ್ತಿದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರ ಶಾಸಕರಿಗೆ ಈ ಮೂಲಕ ಅಭಿನಂದನೆಯನ್ನು ತಿಳಿಸಿದರು.
Advertisement
Advertisement
ಮೀಸಲಾತಿ ನೀಡುವ ಬಗ್ಗೆ ಮಾರ್ಚ್ 15ರಂದು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮಾತು ಕೊಟ್ಟಿತ್ತು. ಸರ್ಕಾರ ಕೊಟ್ಟ ಮಾತು ಸೆಪ್ಟೆಂಬರ್ 15ಕ್ಕೆ ಮುಕ್ತಾಯಗೊಂಡಿದೆ. ಮಲೆಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನ ಪ್ರಾರಂಭವಾಗಿದ್ದು, ಇಂದು 29ನೇ ದಿವಸಕ್ಕೆ ನಮ್ಮ ಬೃಹತ್ ಅಭಿಯಾನ ಕಾಲಿಟ್ಟಿದೆ. ಕರ್ನಾಟಕದ ಸೆ.7 ರಷ್ಟು ಭಾಗ ಪೂರೈಸಿ ಬೆಳಗಾವಿಗೆ ಬಂದಿದ್ದೇವೆ ಎಂದರು. ಇದನ್ನೂ ಓದಿ: ಕೊರೊನಾ ಇಳಿಮುಖ – ಉಡುಪಿ ಕೃಷ್ಣಮಠದಲ್ಲಿ ಸಾರ್ವಜನಿಕ ಅನ್ನಪ್ರಸಾದ ಸೇವೆ ಆರಂಭ
Advertisement
Advertisement
ಅಧಿವೇಶನದಲ್ಲಿ ಕೊಟ್ಟ ಮಾತು ನೆನಪಿಸಲು ಭಾರತದ ಬಾಹುಬಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಶಾಸಕರಾದ ಅರವಿಂದ್ ಬೆಲ್ಲದ, ಸಿದ್ದು ಸವದಿ, ಶಿವಾನಂದ ಪಾಟೀಲ್ ಅವರು ಸಹ ಇದಕ್ಕೆ ಸಾಥ್ ಕೊಟ್ಟಿದ್ದಾರೆ. ಯತ್ನಾಳ್ ಅವರ ಜೊತೆ ದನಿಗೂಡಿಸಿ ಧರಣಿ ಮಾಡ್ತಿದ್ದಾರೆ. ಇದನ್ನು ನೋಡಿದ್ರೆ ಪಂಚಮಸಾಲಿ ಮೀಸಲಾತಿ ಕೆಲವೇ ದಿನಗಳಲ್ಲಿ ನ್ಯಾಯ ಪಡೆದುಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಸಹ ಅಧಿವೇಶನ ಮುಕ್ತಾಯದೊಳಗೆ ಯಾರಾದರೂ ಈ ಕುರಿತು ಧ್ವನಿ ಎತ್ತುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ವಿ. ಆಡಳಿತಾರೂಢ ಪಕ್ಷದ ಶಾಸಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಧ್ವನಿ ಎತ್ತಿದ್ದಾರೆ. ನಮ್ಮ ಜೊತೆ ಮೀಸಲಾತಿ ಬಯಸುವ ಎಲ್ಲ ಸಮುದಾಯದ ಪರ ಎಲ್ಲರೂ ಸಹ ಧ್ವನಿ ಎತ್ತಿದ್ದಾರೆ. ಪಂಚಮಸಾಲಿಗಳು ಎಲ್ಲರ ಜೊತೆ ಕೂಡಿ ಬಾಳೋರು ಎಂಬುದನ್ನು ಅಧಿವೇಶನದಲ್ಲಿ ತೋರಿಸುವ ಕೆಲಸ ಯತ್ನಾಳ್ ಗೌಡರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ
ಧ್ವನಿ ಎತ್ತಿದ ನಾಲ್ಕು ನಾಯಕರಿಗೆ ಪಂಚಮಸಾಲಿ ಸಮುದಾಯದ ಪರ ಅನಂತ ಅನಂತ ಧನ್ಯವಾದ. ಕೂಡಲೇ ಯತ್ನಾಳ್, ಬೆಲ್ಲದ್‍ರವರ ಹಕ್ಕೊತ್ತಾಯ ಮಂಡನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕೊಡಬೇಕು. ನಾಳೆ ಬೆಳಗಾವಿಗೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಬರ್ತಿದ್ದಾರೆ. ನಮ್ಮ ಸಮಾಜದ ಎಲ್ಲ ನಾಯಕರು ಬೆಳಗಾವಿಗೆ ಬರ್ತಿದ್ದಾರೆ. ನಾಳೆ ಜಿಲ್ಲಾ ಮಟ್ಟದ ಪ್ರತಿಜ್ಞಾ ಪಂಚಾಯತ್ ಅಭಿಯಾನ ಗಾಂಧಿ ಭವನದಲ್ಲಿ ನಡೆಯುತ್ತಿದೆ. ಇದಾದ ಬಳಿಕ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೃತನ ಕುಟುಂಬಕ್ಕೆ ಬಹುಮಾನದ ಹಣ ನೀಡಿದ ಮೈಸೂರು ಪೊಲೀಸರು
ಬೊಮ್ಮಾಯಿ ಅವರು ಸಹ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಯತ್ನಾಳ್ ಜೊತೆ ಸಿಎಂ ಚರ್ಚಿಸಿದ್ದಾರೆ. ಅಕ್ಟೋಬರ್ ಒಂದನೇ ತಾರೀಖಿನೊಳಗೆ ನಾವು ಗಡುವು ಕೊಟ್ಟಿದ್ದೇವೆ. ಒಂದನೇ ತಾರೀಖಿನೊಳಗೆ ನಮಗೆ ಸರ್ಕಾರ ನ್ಯಾಯ ದೊರಕಿಸಿಕೊಡುತ್ತೆಂಬ ವಿಶ್ವಾಸ ಇದೆ. ನಮ್ಮ ಅಭಿಯಾನ ಮುಕ್ತಾಯ ಆಗೋದ್ರೊಳಗಾಗಿ ನ್ಯಾಯ ಸಿಗದಿದ್ರೆ ಮತ್ತೆ ಧರಣಿ ಸತ್ಯಾಗ್ರಹ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.