ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ ಎಂದು ರಾಜ್ಯ ಸರ್ಕಾರ ಮದ್ರಾಸ್ ಹೈ ಕೋರ್ಟ್ ಗೆ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ಸಲ್ಲಿಸಿದೆ.
ಬೆಂಗಳೂರಿನ ಅಮೃತ ತಾವು ಜಯಲಲಿತಾರ ಪುತ್ರಿ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ನೀಡಿದೆ ಎಂದು ತಮಿಳುನಾಡು ಪರ ವಕೀಲ ವಿಜಯ್ ನಾರಾಯಣ್ ಹೇಳಿದ್ದಾರೆ.
Advertisement
Advertisement
Advertisement
ಅರ್ಜಿದಾರರಾದ ಅಮೃತಾ ತಾವು ಜಯಲಲಿತಾರ ಪುತ್ರಿ ಎಂದು ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ತಾವು ಮಾಜಿ ಸಿಎಂ ಪುತ್ರಿ ಎಂದು ಹೇಳಿಕೊಳ್ಳುವ ಅಮೃತ ಇದೂವರೆಗೂ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ತಾಯಿ ಜೊತೆಗಿನ ಒಂದು ಫೋಟೋವನ್ನು ಸಹ ಬಹಿರಂಗಗೊಳಿಸಿಲ್ಲ. ಹಾಗಾಗಿ ಅಮೃತ ಹೇಳುತ್ತಿರೋದು ಸುಳ್ಳು ಎಂದು ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ವಾದ ಮಂಡಿಸಿದ್ದಾರೆ.
Advertisement
1980 ಆಗಸ್ಟ್ ತಿಂಗಳಲ್ಲಿ ಅಮೃತ ಜನಿಸಿದ್ದಾರೆ. ಹೀಗಾಗಿ 1980ರಲ್ಲಿಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಜಯಲಲಿತಾ ಭಾಗಿಯಾಗಿದ್ದ ದೃಶ್ಯಾವಳಿಗಳ ವಿಡಿಯೋ ಸಲ್ಲಿಸಲಾಗಿದೆ. ಈ ಕಾರ್ಯಕ್ರಮ ಅಮೃತಾ ಹುಟ್ಟುವ ಒಂದು ತಿಂಗಳ ಮೊದಲೇ ನಡೆದಿತ್ತು. ವಿಡಿಯೋದಲ್ಲಿ ಜಯಲಲಿತಾ ಗರ್ಭಿಣಿಯಾದಂತೆ ಕಂಡಿಲ್ಲ. ಜಯಲಲಿತಾರ ಇತರೆ ಸಂಬಂಧಿಗಳ ಡಿಎನ್ ಸ್ಯಾಂಪಲ್ ಪಡೆದುಕೊಂಡು, ಅಮೃತಾರ ಡಿಎನ್‍ಎ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕೆಂದು ವಿಜಯ್ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದಾರೆ.