ಬೆಂಗಳೂರು: ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಒಡಕುಂಟಾಗಿದೆ. ಮೊನ್ನೆ ಮೊನ್ನೆಯಷ್ಟೇ ಪಂಚಮಸಾಲಿ ಮೂರನೇ ಪೀಠದ ಸ್ಥಾಪನೆಯನ್ನು ಬೆಂಬಲಿಸಿದ್ದ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
Advertisement
ನಿರಾಣಿಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನೀವು ಎಂಎಲ್‍ಎ ಆಗಬೇಕಾ, ಸಿಎಂ ಆಗಬೇಕಾ, ಜಿಲ್ಲೆಗೊಂದು, ತಾಲೂಕಿಗೊಂದು, ಗ್ರಾಮ ಪಂಚಾಯತ್‍ಗೊಂದು ಪೀಠ ಮಾಡಿಕೊಳ್ಳಿ. ಆದ್ರೆ ನಿಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳಬೇಡಿ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಯಾವ ಪೀಠ ಆದ್ರೂ ಮಾಡಿಕೊಳ್ಳಲಿ. ನಮ್ಮದೇನು ಅಭ್ಯಂತರ ಇಲ್ಲ. ನಾವು ಮೂರನೇ ಪೀಠಕ್ಕೆ ಹೆದರಲ್ಲ ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕೊರೊನಾ ಇಳಿಕೆ 17,266 ಕೇಸ್ – ಒಟ್ಟು 42,470 ಪಾಸಿಟಿವ್, 26 ಸಾವು
Advertisement
Advertisement
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ನಿರಾಣಿ ವಿರುದ್ಧ ಸಿಟ್ಟಾಗಿದ್ದಾರೆ. ಸಿಎಂ ಆಗ್ಲಿಕ್ಕೆ ನಿರಾಣಿ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಅವರ ಸಚಿವ ಸ್ಥಾನವೇ ಉಳಿಯಲ್ಲ. ಇನ್ನೆಲ್ಲಿ ಸಿಎಂ ಆಗ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ನಿರಾಣಿ ಸಹ ತಿರುಗೇಟು ನೀಡಿದ್ದಾರೆ. ಪಂಚಮಸಾಲಿ ಸಮುದಾಯ ದೊಡ್ಡದಿದೆ. ಮೂರನೇ ಪೀಠ ಆದರೆ ತಪ್ಪೇನು ಅಂತಾ ಕೇಳಿದ್ದಾರೆ. ಮೂರನೇ ಪೀಠದ ಅವಶ್ಯಕತೆಯನ್ನು ನಿರ್ಧರಿಸೋದು ಸಮಾಜದ ಜನ. ನಾನಲ್ಲ, ಸ್ವಾಮೀಜಿಗಳು ಆಪಾದನೆ ಬಿಟ್ಟು ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತಗೆದುಕೊಳ್ಳಬೇಕು. ನಾನು ಯಾವತ್ತಾದ್ರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ? ಸ್ವಾಮೀಜಿಗಳಿಗೆ ತಪ್ಪು ಕಲ್ಪನೆ ಉಂಟಾಗಿದ್ದು, ಸಮಯ ನಿಗದಿ ಮಾಡಿದ್ರೆ ನಾನೇ ಅವರನ್ನು ಭೇಟಿ ಆಗಿ ಮಾತನಾಡುತ್ತೇನೆ ಎಂದಿದ್ದಾರೆ. ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ
Advertisement