ಬೆಳಗಾವಿ: ಪಂಚಮಸಾಲಿ (Panchamasali Community) ಮೀಸಲಾತಿ (Reservation) ಹೋರಾಟದ ಫಲವಾಗಿ ಪ್ರವರ್ಗ 3Bಯಲ್ಲಿದ್ದ ಮೀಸಲಾತಿಯನ್ನು ಸರ್ಕಾರ 2Dಗೆ ಸೇರಿಸಿ ಮೀಸಲಾತಿ ನೀಡಿದೆ. ಆ ಬಳಿಕ ಈ ಬಗ್ಗೆ ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ ಎಂದು ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಪ್ರತಿಕ್ರಿಯಿಸಿದ್ದಾರೆ.
Advertisement
ಪ್ರವರ್ಗ 3Bಯಲ್ಲಿರುವ ಪಂಚಮಸಾಲಿ ಸಮುದಾಯ ಶೇ.5 ಮೀಸಲಾತಿ ಇದೆ. ಪ್ರವರ್ಗ 2Aಗೆ ಸೇರ್ಪಡೆ ಆದರೆ ಶೇ.15 ಮೀಸಲಾತಿ ಅನುಕೂಲ ಸಿಗುತ್ತಿತ್ತು. ಹಾಗಾಗಿ ಸರ್ಕಾರದ ಮುಂದೆ ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು. ಇದೀಗ 2D ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಕ್ಕಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಚಿವ ಸಂಪುಟದ ನಿರ್ಣಯ ನಮ್ಮ ಕೈಸೇರಿಲ್ಲ. ಸರ್ಕಾರ ಹೊಸ ವರ್ಗಗಳನ್ನು ಮಾಡಿರುವ ಬಗ್ಗೆ ಮತ್ತು ನಾವು ಕೇಳಿರುವ ಮೀಸಲಾತಿ ಪ್ರಮಾಣ ನಮಗೆ ಕೊಡಲಾಗಿದೆಯೇ ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2d ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ
Advertisement
Advertisement
ನಾವು ಕೇಳಿರುವಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗುವ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಸಿ ಮತ್ತು ಡಿ ವರ್ಗಕ್ಕೆ ಮೀಸಲಾತಿ ನೀಡಿದೆ. ಇದರ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಉತ್ತರಿಸುತ್ತೇನೆ. ನಿರ್ಣಯದ ಪ್ರತಿಯಲ್ಲಿ ಪಂಚಮಸಾಲಿ ಹೆಸರೇ ಉಲ್ಲೇಖಿಸಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುತ್ತೇವೆ. ನಮ್ಮ ಸಮುದಾಯಕ್ಕೆ ನ್ಯಾಯ ಕೊಟ್ಟು ಉಳಿದ ಸಮುದಾಯಕ್ಕೂ ಕೊಡಲಿ ನಮ್ಮ ವಿರೋಧವಿಲ್ಲ. ಸರ್ಕಾರದ ತೀರ್ಮಾನಕ್ಕೆ ನಾವು ಬದ್ಧ. 2Dಯಲ್ಲಿ ಪಂಚಮಸಾಲಿ ಮೀಸಲಾತಿ ಎಷ್ಟಿದೆ ಎಂದು ವಿಮರ್ಶೆ ಮಾಡುತ್ತೇವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮ್ಮ ಮೀಸಲಾತಿ ಎಷ್ಟಿದೆ? ಎಷ್ಟು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ – ಡಿಪಿಆರ್ ಚುನಾವಣೆಗೆ ಮಾತ್ರ ಮೀಸಲಾಗಬಾರದು: ರೈತರ ಆಗ್ರಹ