ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಪತ್ನಿ, ನಟಿ ಜಯಾ ಬಚ್ಚನ್ (Jaya Bachchan) ಸತತ 5ನೇ ಬಾರಿ ಸಮಾಜವಾದಿ ಪಕ್ಷದಿಂದ ರಾಜ್ಯ ಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಚುನಾವಣಾ ಆಯೋಗಕ್ಕೆ ತಮ್ಮ ಒಟ್ಟು ಆಸ್ತಿಯನ್ನು ಘೋಷಣೆ ಮಾಡಿದ್ದು, ಅವರ ಕುಟುಂಬದ ಒಟ್ಟು ಆಸ್ತಿ (Property) 1589 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದಾರೆ.
Advertisement
ಜಯಾ ಬಚ್ಚನ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲವಾದರೂ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2004 ರಿಂದ ಅವರು ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಅಂದಿನಿಂದಲೇ ಸತತವಾಗಿ ರಾಜ್ಯಸಭಾ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಒಟ್ಟು ಆಸ್ತಿಯನ್ನು ಘೋಷಿಸೋದು ಕಡ್ಡಾಯ ಕೂಡ ಆಗಿದೆ.
Advertisement
Advertisement
ಹಾಗಂತ ಅಷ್ಟೂ ಆಸ್ತಿಯೂ ಜಯಾ ಬಚ್ಚನ್ ಅವರಿಗೆ ಸೇರಿದ್ದಲ್ಲ. ಜಯಾ ಬಚ್ಚನ್ ಮತ್ತು ಪತಿ ಅಮಿತಾಭ್ ಬಚ್ಚನ್ ಸೇರಿದಂತೆ ದಂಪತಿಯ ಒಟ್ಟು ಆಸ್ತಿ 1589 ಕೋಟಿ ರೂಪಾಯಿ ಇದೆ. ಇದರಲ್ಲಿ ಅಮಿತಾಭ್ ಬಚ್ಚನ್ ಆಸ್ತಿ 273, 74,96, 590 ಕೋಟಿ ರೂಪಾಯಿ ಆಗಿದ್ದರೆ, ಜಯಾ ಬಚ್ಚನ್ ಅವರದ್ದು 1, 63, 56,190 ಕೋಟಿ ರೂಪಾಯಿ ಆಗಿದೆ.
Advertisement
ಇದರಲ್ಲಿ ಚರಾಸ್ತಿ 849.11 ಕೋಟಿ ರೂಪಾಯಿ ಮೌಲ್ಯದ್ದು ಆಗಿದ್ದರೆ, ಚರಾಸ್ತಿಯಲ್ಲಿ 40.97 ಕೋಟಿ ರೂಪಾಯಿ ಜಯಾ ಬಚ್ಚನ್ ಅವರಿಗೆ ಸೇರಿದೆ. ಸ್ಥಿರಾಸ್ತಿ ಒಟ್ಟು ಮೌಲ್ಯ 729.77 ಕೋಟಿ ರೂಪಾಯಿ. ಜಯಾ ಅವರ ಬಳಿ 9.82 ಲಕ್ಷ ರೂಪಾಯಿ ಮೌಲ್ಯದ ಕಾರು ಇದ್ದರೆ, 4.97 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರ ಹೊಂದಿದ್ದಾರೆ. ಅಮಿತಾಭ್ ಬಳಿ 16 ಕಾರುಗಳಿದ್ದು, 54.77 ಕೋಟಿ ರೂಪಾಯಿ ಮೌಲ್ಯದ ಬಂಗಾರ ಹೊಂದಿದ್ದಾರೆ. ಅಮಿತಾಭ್ ಬಳಿ ಇರುವ ಕಾರಿನ ಬೆಲೆಯೇ 17.66 ಕೋಟಿ ರೂಪಾಯಿದ್ದು ಆಗಿದೆ.
ಜಯಾ ಬಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10,11,33,172 ಕೋಟಿ ರೂಪಾಯಿ ಹೊಂದಿದ್ದರೆ, ಅಮಿತಾಭ್ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 120,45,62,083 ಹೊಂದಿದ್ದಾರೆ. ಈ ದಂಪತಿಯು ಬಾಡಿಗೆ, ವೇತನ, ವಿವಿಧ ಕಂಪೆನಿಗಳಲ್ಲಿನ ಹೂಡಿಕೆ, ನಿರ್ಮಾಣ ಸಂಸ್ಥೆ ಹೀಗೆ ನಾನಾ ಮೂಲಗಳಿಂದ ಬಂದಿರುವ ಆದಾಯದ ಒಟ್ಟು ಮೊತ್ತವಾಗಿದೆ.