ICC ಹಣಕಾಸು ಸಮಿತಿಗೆ ಅಮಿತ್ ಶಾ ಪುತ್ರ ಮುಖ್ಯಸ್ಥ – ದಾದಾಗಿಲ್ಲ BCCI ಬೆಂಬಲ

Public TV
2 Min Read
Sourav Ganguly JayShah Amit Shah

ದುಬೈ: ಐಸಿಸಿ (ICC) ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ (Greg Barclay) ಅವರನ್ನು 2ನೇ ಅವಧಿಗೆ ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಬಿಸಿಸಿಐನಲ್ಲಿ 2ನೇ ಅವಧಿಗೆ ಕಾರ್ಯದರ್ಶಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ (Jay Shah) ಅವರಿಗೂ ಐಸಿಸಿಯಲ್ಲಿ (ICC) ದೊಡ್ಡ ಜವಾಬ್ದಾರಿ ಸಿಕ್ಕಿದೆ. ಐಸಿಸಿಯ ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

icc

ಜಯ್ ಶಾ ಅವರನ್ನು ಐಸಿಸಿಯ (ICC) ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ (Financial and Commercial Affairs Committee) ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ. ಐಸಿಸಿ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಐಸಿಸಿಯಲ್ಲಿ ಜಯ್ ಶಾ ಬಿಸಿಸಿಐ ಅನ್ನು ಪ್ರತಿನಿಧಿಸಲಿದ್ದಾರೆ ಅನ್ನೋದು ಖಚಿತವಾಗಿದೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Greg Barclay 1

ವಿತ್ತ ಹುದ್ದೆಗೆ ಏಕಿಷ್ಟು ಮಹತ್ವ?
ಐಸಿಸಿ ವಾಣಿಜ್ಯ ವ್ಯವಹಾರಗಳ ಸಮಿತಿಯ ಹುದ್ದೆಗೆ ಅಧ್ಯಕ್ಷಷ್ಟೇ ಗೌರವವಿದೆ. ಏಕೆಂದರೆ ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಆದಾಯ ಹಂಚಿಕೆ ನಿರ್ಧರಿಸುತ್ತದೆ. ಐಸಿಸಿ ನಡೆಸುವ ಮಹತ್ವದ ಪ್ರಾಯೋಜಕತ್ವ ಒಪ್ಪಂದಗಳು ಈ ಸಮಿತಿ ಮೂಲಕ ನಿರ್ಧಾರವಾಗುತ್ತದೆ. ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಬಜೆಟ್ ಹಂಚಿಕೆ ಮಾಡುವುದೂ ಇದೇ ಸಮಿತಿ ಹಾಗಾಗಿ ಈ ಹುದ್ದೆಗೆ ಮಹತ್ವವಿದೆ. ಇದನ್ನೂ ಓದಿ: ವಿಶ್ವಕಪ್ ಗೆದ್ದರೆ ಬಾಬರ್ 2048ಕ್ಕೆ ಪಾಕ್ ಪ್ರಧಾನಿ ಆಗ್ತಾರೆ – ಗಾವಸ್ಕರ್ ಭವಿಷ್ಯ

Sourav Ganguly 1

ಬಿಸಿಸಿಐ ಅಧ್ಯಕ್ಷ ಅವಧಿ ಮುಕ್ತಾಯಗೊಂಡ ಬಳಿಕ 2ನೇ ಬಾರಿ ಅಧಿಕಾರವಧಿಯಲ್ಲಿ ಮುನ್ನಡೆಯಲು ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಒಪ್ಪಿರಲಿಲ್ಲ. ಆ ಬಳಿಕ ಗಂಗೂಲಿ ಐಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಬೆಂಬಲ ನೀಡದ ಕಾರಣ ಐಸಿಸಿ ಅಧ್ಯಕ್ಷರ ಸ್ಪರ್ಧಾ ಕಣದಿಂದ ಗಂಗೂಲಿ ಹಿಂದೆ ಸರಿದಿದ್ದರು. ಆದರೆ ಬಿಸಿಸಿಐನಲ್ಲಿ ಕಾರ್ಯದರ್ಶಿಯಾಗಿರುವ ಅಮಿತ್ ಶಾ ಪುತ್ರ ಇದೀಗ ಐಸಿಸಿಯಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article