ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕೂ ಮುನ್ನ 100 ಕೋಟಿ ರೂ. ಐಷಾರಾಮಿ ಮನೆಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ:ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ: ಕೃತಿ ಶೆಟ್ಟಿ
View this post on Instagram
ಮನ್ನತ್‌ನ ಶಾರುಖ್ ಖಾನ್ ಮನೆಯ ಸಮೀಪ ರಣವೀರ್ ಸಿಂಗ್ ಹಾಗೂ ದೀಪಿಕಾ 100 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ನಾಲ್ಕು ಪ್ಲೋರ್‌ನ ಮನೆ ಇದಾಗಿದೆ. ಈ ಮನೆ ಸಮುದ್ರ ತೀರದಲ್ಲಿದೆ. ಈ ಮನೆಯ ಅಳತೆ 11,266 ಚದರ ಅಡಿ ಇದೆ. ಇದರ ಜೊತೆಗೆ ಟೆರೇಸ್ ಕೂಡ ಇದೆ. ನಟಿಯ ಹೊಸ ಮನೆ ಕೆಲಸ ಅಂತಿಮ ಹಂತದಲ್ಲಿದೆ. ಇನ್ನೂ ಮುಂಬೈನ ಮನ್ನತ್‌ನಲ್ಲಿ ಬಹುತೇಕ ಸೆಲೆಬ್ರಿಟಿಗಳು ಇಲ್ಲಿಯೇ ವಾಸವಾಗಿದ್ದಾರೆ.
ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಇತ್ತೀಚೆಗೆ ಪಠಾಣ್, ಜವಾನ್, ಫೈಟರ್, ‘ಕಲ್ಕಿ 2898 ಎಡಿ’ ರೀತಿಯ ಹಿಟ್ ಚಿತ್ರಗಳಲ್ಲಿ ದೀಪಿಕಾ ನಟಿಸಿ ಟಾಪ್ ಲಿಸ್ಟ್‌ನಲ್ಲಿದ್ದಾರೆ. ಇನ್ನೂ ಬೇಡಿಕೆ ಇರುವಾಗಲೇ ತಾಯಿ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ತಾಯಿ ಆಗುವ ಘೋಷಣೆ ಮಾಡಿದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ.