ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಮಗಳು ದುವಾ (Dua Padukone) ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ದೀಪಿಕಾ ನಟನೆಗೆ ಯಾವಾಗ ಕಮ್‌ಬ್ಯಾಕ್ ಮಾಡ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ತಾಯನ್ತದ ಬಳಿಕ ನಟನೆಗೆ ಮರಳುವ ಸವಾಲುಗಳು ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ನಿತಿನ್‌ಗೆ ಜೊತೆಯಾಗಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಶ್ರೀಲೀಲಾ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೀಪಿಕಾ, ನನ್ನ ಬದುಕಿನಲ್ಲಿ ಈಗ ನಾನು ಹೊಸ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಒಬ್ಬ ತಾಯಿಯಾಗಿ ಮಗುವಿಗೆ ಹೇಗೆ ಸಮಯ ಕೊಡಬೇಕು. ಹಾಗೆಯೇ ಮತ್ತೆ ಕೆಲಸಕ್ಕೆ ಮರಳುವುದಾದರೆ ನಾನು ಮಾನಸಿಕವಾಗಿ ಹೇಗೆ ಸಿದ್ಧವಾಗಿರಬೇಕು? ಎಂದು ತಯಾರಾಗುತ್ತಿದ್ದೇನೆ ಎಂದಿದ್ದಾರೆ.
ನಾನು ಕೆಲಸಕ್ಕೆ ಮರಳುತ್ತೇನೆ ಎಂದರೆ ನನ್ನಲ್ಲಿ ಯಾವುದೇ ಪಾಪಪ್ರಜ್ಞೆ ಇರಬಾರದು. ನನ್ನ ಮಗಳಿಗೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಲ್ಲ ಎಂಬ ಕೊರಗಿನಿಂದ ಕೆಲಸ ಮಾಡಬಾರದು. ಈ ನಿಟ್ಟಿನಲ್ಲಿ ತಾವು ತಯಾರಾಗುತ್ತಿರೋದಾಗಿ ನಟಿ ಹೇಳಿದ್ದಾರೆ.
ಇನ್ನೂ ತಾಯಿಯಾದ ಬಳಿಕ ಸಿನಿಮಾಗಳ ಆಯ್ಕೆಯೂ ಬದಲಾಗುತ್ತದೆ ಎಂದು ಕೂಡ ನಟಿ ಮಾತನಾಡಿದ್ದಾರೆ. ನಮ್ಮ ಮನಸ್ಥಿತಿ ಕೂಡ ಬದಲಾಗುತ್ತದೆ ಎಂದಿದ್ದಾರೆ. ಅದರಂತೆ ಕಥೆಯಲ್ಲೂ ಬದಲಾವಣೆಯಾಗುತ್ತದೆ ಎಂದಿದ್ದಾರೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ- 2’ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ. ಕಳೆದ ವರ್ಷ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಇನ್ನೂ ಇದರ ಸೀಕ್ವೆಲ್ ಈ ವರ್ಷದ ಅಂತ್ಯ ಡಿಸೆಂಬರ್‌ನಲ್ಲಿ ಶುರು ಮಾಡೋದಾಗಿ ನಿರ್ದೇಶಕ ನಾಗ್ ಅಶ್ವೀನ್ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ಈ ಸಿನಿಮಾತಂಡಕ್ಕೆ ದೀಪಿಕಾ ಕೂಡ ಸೇರಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.