ಜೈಪುರ: ರಾಜಸ್ಥಾನ ಹಾಗೂ ಛತ್ತೀಸ್‍ಗಢ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗಲೇ, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಪಕ್ಷ ಬದಲಿಸುತ್ತಿದ್ದಾರೆ.
ಛತ್ತೀಸ್‍ಗಢ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮದಯಾಳ್ ಬಿಜೆಪಿ ಕಡೆಗೆ ಹೆಜ್ಜೆ ಹಾಕಿದ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ, ರಾಜಸ್ಥಾನದ ಬಿಜೆಪಿ ನಾಯಕ ಮಾನವೇಂದ್ರ ಸಿಂಗ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
Advertisement
Delhi: Manvendra Singh joins Congress party, says, "I met Rahul Gandhi in the morning today and he welcomed me into the Party. I have confidence that my supporters will continue to support me." pic.twitter.com/D7rrgXbAM3
— ANI (@ANI) October 17, 2018
Advertisement
ರಾಜಸ್ಥಾನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲೆಟ್ ನೇತೃತ್ವದಲ್ಲಿ ಮಾನವೇಂದ್ರ ಸಿಂಗ್ ಅವರು ಪಕ್ಷಕ್ಕೆ ಸೇರ್ಪಡೆಯಾದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೆಯೋ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
Advertisement
ಬಾರ್ಮರ್ ಮತ್ತು ಜೈಸಲ್ಮೆರ್ ಪ್ರಾಂತ್ಯದ ರಜಪೂತ ಜನಾಂಗದ ಮತಗಳನ್ನು ಪಡೆಲು ಕಾಂಗ್ರೆಸ್ ಈ ತಂತ್ರ ಹೂಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ರಾಜೇಂದ್ರ ರಾಥೋರ್ ಅವರು, ನಮ್ಮ ಪಕ್ಷದಿಂದ ದೂರ ಉಳಿದಿದ್ದ ಮಾನವೇಂದ್ರ ಸಿಂಗ್ ಯಾವುದೇ ಪಕ್ಷ ಸೇರಿಕೊಂಡರೂ ನಮಗೆ ಹಾನಿಯಾಗಲ್ಲ. ಆದರೆ ಕಾಂಗ್ರೆಸ್ ನಾಯಕರು ನಮ್ಮವರನ್ನು ಸೆಳೆಯುವ ತಂತ್ರ ಹೂಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
It's Manvendra Singh's decision. His father Jaswant Singh spent his entire life fighting with Congress. BJP gave him respect as Finance&Defence Min. It's the same Cong party that didn't appoint any Rajput from Rajasthan as minister in Centre in 70 yrs: Rajyavardhan Singh Rathore pic.twitter.com/tuUujXmPHg
— ANI (@ANI) October 17, 2018