ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

Public TV
1 Min Read
BUMRAH SANJANA

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಸಂಜನಾ ಗಣೇಶನ್ (Sanjana Ganesan) ದಂಪತಿಗೆ ಗಂಡು ಮಗು (Baby Boy)  ಜನಿಸಿದೆ.

ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾದಲ್ಲಿ (Instagram) ಫೋಟೋ ಸಮೇತ ಬುಮ್ರಾ ಹಂಚಿಕೊಂಡಿದ್ದಾರೆ. ಅಲ್ಲದೆ ಮಗುವಿನ ಹೆಸರನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಂಗದ್ ಎಂದು ಮಗನಿಗೆ ನಾಮಕರಣ ಮಾಡಿರುವುದಾಗಿ ಬುಮ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

 

View this post on Instagram

 

A post shared by jasprit bumrah (@jaspritb1)

 

ಫೋಟೋದೊಂದಿಗೆ ಬುಮ್ರಾ ಅವರು, ಮಗನ ಆಗಮನದೊಂದಿಗೆ ನಮ್ಮ ಪುಟ್ಟ ಕುಟುಂಬವು ಇಂದು ಬೆಳೆದಿದೆ. ಇಂದು ಬೆಳಗ್ಗೆ ಮಗ ಹುಟ್ಟಿದ್ದಾನೆ. ಅಂಗದ್ ಜಸ್ಪ್ರೀತ್ ಬುಮ್ರಾನನ್ನು ಇಂದು ನಾವು ಜಗತ್ತಿಗೆ ಪರಿಚಯಿಸಿದ್ದೇವೆ. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದಲ್ಲಿ ಇದೀಗ ಹೊಸ ಅಧ್ಯಾಯವೊಂದು ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರು 2021ರ ಮಾರ್ಚ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ತನ್ನ ಪತ್ನಿಯ ಜೊತೆಗಿರಲು ಬುಮ್ರಾ ಏಷ್ಯಾ ಕಪ್ 2023 ನಿಂದ ದೂರ ಉಳಿದಿದ್ದರು. ಭಾರತೀಯ ಕ್ರಿಕೆಟ್ ತಂಡದ ಬುಮ್ರಾ ಪ್ರಮುಖ ಆಟಗಾರರಾಗಿದ್ದು, ಬೆನ್ನುನೋವಿನಿಂದಾಗಿ ಸುಮಾರು ಒಂದು ವರ್ಷದ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದರು.

ಪಾಕಿಸ್ತಾನ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಂಡಿದ್ದರೂ, ದ್ವಿತೀಯಾರ್ಧದಲ್ಲಿ ನಿರಂತರ ಮಳೆಯಿಂದಾಗಿ ಪಂದ್ಯವು ವಾಶ್ ಔಟ್ ಆಗಿದ್ದರಿಂದ ಅವರು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

Web Stories

Share This Article