ಮುಂಬೈ: ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದ (Team India) ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಬಾರಿ ಆಸ್ಟ್ರೇಲಿಯಾದಲ್ಲಿ (Australia) ನಡೆಯುವ ಟಿ20 ವಿಶ್ವಕಪ್‍ನಿಂದ (T20 World Cup) ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
Advertisement
ಟೀಂ ಇಂಡಿಯಾದ ಬಲಗೈ ವೇಗದ ಬೌಲರ್ ಬುಮ್ರಾ ಬೆನ್ನುಮೂಳೆಯ ಮುರಿತದಿಂದ ಪೂರ್ಣಪ್ರಮಾಣದ ಚೇತರಿಕೆ ಕಾಣದಿರುವುದರಿಂದಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಸೋಮವಾರ ಬಿಸಿಸಿಐ (BCCI) ಸ್ಪಷ್ಟಪಡಿಸಿತ್ತು. ಆ ಬಳಿಕ ಬಿಸಿಸಿಐ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸ್ಫೋಟಕ ಶತಕ ಸಿಡಿಸಿ T20ನಲ್ಲಿ ವಿಶ್ವದಾಖಲೆ ಬರೆದ ಮಿಲ್ಲರ್
Advertisement
Advertisement
ಬುಮ್ರಾ ಇತ್ತೀಚೆಗಷ್ಟೇ ಗಾಯದಿಂದ ಚೇತರಿಕೆ ಕಂಡು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೂಲಕ ಕಂಬ್ಯಾಕ್ ಮಾಡಿದ್ದರು. ಆ ಬಳಿಕ ದಕ್ಷಿಣ ಆಫ್ರಿಕಾ ಸರಣಿ ವೇಳೆ ಮತ್ತೆ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಟಿ20 ವಿಶ್ವಕಪ್ ತಂಡದಿಂದ ಬುಮ್ರಾ ಔಟ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಅಭಿಮಾನಿಗಳು ಬುಮ್ರಾ ಆಡಲು ಫಿಟ್ ಆಗಿಲ್ಲದಿದ್ದರೂ ಬಿಸಿಸಿಐ ಯಾಕೆ ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಿದ್ದು? ವಿಶ್ರಾಂತಿ ನೀಡಿ ವಿಶ್ವಕಪ್‍ಗೆ ಆಯ್ಕೆ ಮಾಡಬಹುದಿತ್ತಲ್ಲ. ಅಲ್ಲಿವೆರೆಗೆ ವಿಶ್ರಾಂತಿ ನೀಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಬುಮ್ರಾ ಇಲ್ಲ ಈ ಬಾರಿ ಟಿ20 ವಿಶ್ವಕಪ್ ಕೂಡ ನಮಗೆ ಡೌಟ್ ಎಂದು ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ವಿಶೇಷ ದಾಖಲೆ ಬರೆದ ರನ್ ಮಿಷಿನ್ ಕೊಹ್ಲಿ
Advertisement
#JaspritBumrah in a one year jasprit played only 5 test ,5 odi ,5 t20 ,Played matches throughout the IPL, yet became unfit pic.twitter.com/Qp7MYBvNHK
— Deepak (@Deepak53349494) September 30, 2022
ಟಿ20 ವಿಶ್ವಕಪ್‍ನಿಂದ ಬುಮ್ರಾ ಹೊರಗುಳಿದ ಬಳಿಕ ಅವರ ಬದಲಿ ಆಟಗಾರನ ನೇಮಕವನ್ನು ಬಿಸಿಸಿಐ ಇನ್ನೂ ಷೋಷಿಸಿಲ್ಲ. ಇದೀಗ ಮೊಹಮ್ಮದ್ ಶಮಿ, ದೀಪಕ್ ಚಹರ್ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿ ಇದೆ. ಈಗಾಗಲೇ ಶಮಿ ಮತ್ತು ಚಹರ್ ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.