ಮುಂಬೈ: ಗಾಯಾಳುವಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ವಾಪಸಾತಿಗೆ ಡೇಟ್ ಫಿಕ್ಸ್ ಆಗಿತ್ತು. ಶ್ರೀಲಂಕಾ (Sri Lanka) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಗೊಂಡಿದ್ದರು. ಆದರೆ ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐ (BCCI) ರಿಸ್ಕ್ ತೆಗೆದುಕೊಳ್ಳಲು ಹಿಂಜರಿದು ವಿಶ್ರಾಂತಿ ಮುಂದುವರಿಸಿದೆ.
Advertisement
ಏಷ್ಯಾಕಪ್, ಟಿ20 ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಬುಮ್ರಾ ಕಾಣಿಸಿಕೊಂಡಿರಲಿಲ್ಲ. ಗಾಯದಿಂದಾಗಿ ವಿಶ್ರಾಂತಿಯಲ್ಲಿದ್ದ ಬುಮ್ರಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮೂಲಕ ಕಂಬ್ಯಾಕ್‍ಗೆ ಸಿದ್ಧರಾಗಿದ್ದರು. ಎನ್‍ಸಿಎನಲ್ಲಿ (NCA) ಅಭ್ಯಾಸ ನಡೆಸಿ ಫಿಟ್ ಆಗಿದ್ದ ಬುಮ್ರಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಮೂಲಕ ಪುನರಾಗಮನ ಮಾಡಲು ಬಿಸಿಸಿಐ ಅವಕಾಶ ನೀಡಿತ್ತು. ಆದರೆ ಇದೀಗ ಮತ್ತೆ ಬುಮ್ರಾ ವಿಶ್ರಾಂತಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ‘ಬಾರಿ ಎಡ್ಡೆ ಗೊಬ್ಬಿಯ’ ಸೂರ್ಯ ಎಂದ ರಾಹುಲ್ – ಅವರಿಗೆ ‘ತುಳು’ ಕಲಿಸಿ ಎಂಬ ಮನವಿ ಇಟ್ಟ ದೀವಿಶಾ ಶೆಟ್ಟಿ
Advertisement
Advertisement
ಬುಮ್ರಾ ಅವರ ಫಿಟ್‍ನೆಸ್ ಮತ್ತು ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿ ವಿಶ್ರಾಂತಿ ನೀಡಲು ಮುಂದಾಗಿದೆ. ಈ ಮೂಲಕ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಬುಮ್ರಾ ಆಯ್ಕೆಯಾಗುವ ನಿರೀಕ್ಷೆ ಇದೆ. ಇದೀಗ ಬುಮ್ರಾಗೆ ವಿಶ್ರಾಂತಿ ನೀಡಿ ಮುಂದಿನ ಏಕದಿನ ವಿಶ್ವಕಪ್‍ಗೂ ಮುನ್ನ ಫಿಟ್ ಆಗಿ ಕಂಬ್ಯಾಕ್ ಮಾಡಿಕೊಳ್ಳುವಂತೆ ಬಿಸಿಸಿಐ ಪ್ಲಾನ್ ರೂಪಿಸುತ್ತಿದೆ.
Advertisement
NEWS – Jasprit Bumrah ruled out of 3-match #INDvSL ODI series.
More details here – https://t.co/D45VColEXx #TeamIndia
— BCCI (@BCCI) January 9, 2023
ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಜ.10 ರಿಂದ ಆರಂಭಗೊಳ್ಳಲಿದೆ. ಜ.10, 12 ಮತ್ತು 15 ರಂದು ಮೂರು ಪಂದ್ಯಗಳು ನಡೆಯಲಿದೆ. ಈಗಾಗಲೇ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ಜಯಿಸಿತ್ತು. ಇದನ್ನೂ ಓದಿ: ಪಾಂಡ್ಯಗೆ ರೋಹಿತ್ ಶರ್ಮಾ ನಾಯಕತ್ವ ಬಿಟ್ಟುಕೊಡೋದು ಸೂಕ್ತ: ಜಡೇಜಾ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k