ಟೊಕಿಯೊ: ಬರೋಬ್ಬರಿ 13 ಲಕ್ಷ ರೂ. ವೆಚ್ಚದಲ್ಲಿ ಜಪಾನಿ ವ್ಯಕ್ತಿ ತಾನು ಪ್ರೀತಿಸುತ್ತಿದ್ದ ಗೊಂಬೆ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾನೆ.
ಹೌದು, ಚಿಕ್ಕ ವಯಸ್ಸಿನಿಂದಲೂ ಗಾಯಕಿ ಹಟ್ಸುನೆ ಮಿಕು ಅಂದ್ರೆ ಅಕಿಹಿಕೋ ಗೆ ಅಚ್ಚುಮೆಚ್ಚು. ಪುಟ್ಟ ಬಾಲಕನಿದ್ದಾಗಲೇ ಮಿಕುವನ್ನೇ ಮದುವೆಯಾಗಬೇಕು ಅಂತಾ ಕನಸ್ಸು ಕಂಡಿದ್ದ. ಅದಕ್ಕಾಗಿಯೇ ಸುಮಾರು 9 ಸಾವಿರ ರೂ. ಖರ್ಚು ಮಾಡಿ ಗಾಯಕಿಯನ್ನೇ ಹೋಲುವ ಗೊಂಬೆಯೊಂದನ್ನು ತಯಾರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಈತ ತನ್ನ 35 ವಯಸ್ಸಿನಲ್ಲಿ ತನ್ನ ಮಿಕು ಗೊಂಬೆ ಜೊತೆಗೆ ಅದ್ದೂರಿಯಾಗಿ ಬರೋಬ್ಬರಿ 13 ಲಕ್ಷ ರೂ. ಖರ್ಚು ಮಾಡಿ ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.
ಅಕಿಹಿಕೋ ಪ್ರೀತಿಸಿದ ಹುಡುಗಿ ಆತನನ್ನು ಬಿಟ್ಟು ಹೋದ ಕಾರಣಕ್ಕೆ ನೊಂದಿದ್ದನು. ಆಗ ಚಿಕ್ಕ ವಯಸ್ಸಿನಿಂದಲೂ ಜೊತೆಗಿರುವ ಮಿಕು ಗೊಂಬೆಯನ್ನು ಮದುವೆಯಾಗಿ ಚೆನ್ನಾಗಿರಬಹುದು ಎಂದು ನಿರ್ಧರಿಸಿದನು. ಈ ವಿಚಿತ್ರ ಮದುವೆಗೆ ಅಕಿಹಿಕೋ ತಾಯಿ ಒಪ್ಪಿಗೆ ನೀಡಲಿಲ್ಲ. ಆದರು ವಿರೋಧದ ನಡುವೆಯೆ ಅಕಿಹಿಕೋ ತನ್ನ ಪ್ರೀತಿಯ ಗೊಂಬೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದಾನೆ.
ಅಷ್ಟೇ ಅಲ್ಲದೇ ನನಗೆ ಗಾಯಕಿ ಹಟ್ಸುನೆ ಮಿಕು ಅಂದ್ರೆ ತುಂಬಾ ಇಷ್ಟ. ಅವರನ್ನು ಮದುವೆಯಾಗಲು ನನಗೆ ಅಗೋಲ್ಲ ಆದ್ರೆ ಮಿಕು ತರಹದ ಗೊಂಬೆಯನ್ನು ಪ್ರೀತಿಸಿ ವಿವಾಹವಾಗಿದ್ದೇನೆ. ನಾನು ಎಂದಿಗು ಮಿಕುವಿಗೆ ಮೋಸ ಮಾಡಲ್ಲ, ನಾನು ಪ್ರೀತಿಯಿಂದ ಮಿಕುವನ್ನು ನೋಡಿಕೊಳ್ಳುತ್ತೇನೆ ಎಂದು ಅಕಿಹಿಕೋ ಮಾಧ್ಯಮದವರಿಗೆ ತಿಳಿಸಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews