ಟೋಕಿಯೋ: 5ನೇ ದಿನವೂ ಸತತವಾಗಿ ರಷ್ಯಾ ಸೈನಿಕರು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರವ ಉಕ್ರೇನ್‍ಗೆ (ukraine) ಜಪಾನ್ ಉದ್ಯಮಿ 65 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ.
ಹಿಂಸಾಚಾರಕ್ಕೆ ಬಲಿಯಾದ ಉಕ್ರೇನ್ ಜನರಿಗೆ ಸಹಾಯ ಮಾಡಲು 1 ಬಿಲಿಯನ್ (8.7 ಮಿಲಿಯನ್ ಅಮೇರಿಕನ್ ಡಾಲರ್) ಹಣವನ್ನು ದೇಣಿಗೆ ನೀಡಿ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ (Volodymyr Zelenskyy) ಅವರಿಗೆ ಉದ್ಯಮಿ ಹಿರೋಚಿ ಮಿಕಿತಾನಿ (hiroshi Mikitani) ಅವರು ಪತ್ರ ಬರೆದಿದ್ದಾರೆ. ಮಿಕಿತಾನಿ ಅವರು 2019ರಲ್ಲಿ ಕೈವ್‍ಗೆ ಭೇಟಿ ನೀಡಿದಾ ಝೆಲೆನ್ಸ್ಕಿಯನ್ನು ಭೇಟಿಯಾಗಿದ್ದರು. ನನ್ನ ಆಲೋಚನೆಗಳು ನಿಮ್ಮೊಂದಿಗೆ ಮತ್ತು ಉಕ್ರೇನ್ ಜನರೊಂದಿಗೆ ಇವೆ ಎಂದು ಮಿಕಿತಾನಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ?: ನನ್ನೆಲ್ಲಾ ಪ್ರಾರ್ಥನೆಗಳು ಉಕ್ರೇನ್ ದೇಶದ ಜನರ ಕುರಿತಾಗಿ ಇರಲಿದೆ. ಶಾಂತಿಯುತ ದೇಶ ಹಾಗೂ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಉಕ್ರೇನ್‍ನ್ನು ನ್ಯಾಯಸಮ್ಮತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಎದುರಾದ ದೊಡ್ಡ ಸವಾಲೆಂದು ನಾನು ನಂಬುತ್ತೇನೆ. ರಷ್ಯಾ ಮತ್ತು ಉಕ್ರೇನ್ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಸಿಕೊಳ್ಳಬಹುದು. ಉಕ್ರೇನ್ ಜನರು ಆದಷ್ಟು ಬೇಗ ಮತ್ತೆ ಶಾಂತಿಯ ನಿರಾಳತೆಯನ್ನು ಹೊಂದಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಮಿಕಿತಾನಿ ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!
Advertisement
Advertisement
ಉಕ್ರೇನ್‍ನ ಮೇಲೆ ರಷ್ಯಾ ದೇಶ ಮಾಡಿರುವ ಆಕ್ರಮಣವನ್ನು ವಿಶ್ವದ ಪ್ರಮುಖ ದೇಶಗಳು ಖಂಡಿಸಿವೆ. ಇದರ ಬೆನ್ನಲ್ಲಿಯೇ ರಷ್ಯಾವನ್ನು ವಿಶ್ವದಲ್ಲಿ ಏಕಾಂಗಿಯಾಗಿರುವ ಪ್ರಕ್ರಿಯೆಗಳೂ ನಡೆದಿದ್ದು, ಎಲ್ಲಾ ರೀತಿಯ ಆರ್ಥಿಕ ದಿಗ್ಭಂದನಗಳನ್ನು ರಷ್ಯಾದ ಮೇಲೆ ಹೇರಿದೆ.