ಟೋಕಿಯೊ: ಜಪಾನ್‌ನಲ್ಲಿ (Japan Earthquake) ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇದುವರೆಗೂ 62 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏರಿಕೆಯಾಗುತ್ತಿದೆ. ಭೂಕಂಪದ ನಂತರ ಭೂಕುಸಿತಗಳು ಮತ್ತು ಭಾರೀ ಮಳೆಯಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜನವರಿ 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪವು, ಹೊನ್ಶು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ
Advertisement
Advertisement
ನೂರಾರು ಕಟ್ಟಡಗಳು ಬೆಂಕಿಯಿಂದ ಧ್ವಂಸಗೊಂಡಿವೆ. ವಾಜಿಮಾ ಮತ್ತು ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿವೆ. ಪ್ರಿಫೆಕ್ಚರ್‌ನ ನೋಟೊ ಪೆನಿನ್ಸುಲಾವು ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.
Advertisement
ಭೂಕಂಪದಿಂದ ಜಪಾನ್ ತತ್ತರಿಸಿದ್ದು, 62 ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದೆ. 31,800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಇದನ್ನೂ ಓದಿ: ಜಪಾನ್ ವಿಮಾನ ಅವಘಡ- ಕೋಸ್ಟ್ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ
Advertisement
ವಿಪತ್ತು ಸಂಭವಿಸಿ 40 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ರಕ್ಷಣೆಯ ಅಗತ್ಯವಿರುವ ಜನರ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಬಂದಿದೆ. ಸಹಾಯಕ್ಕಾಗಿ ಜನರು ಕಾಯುತ್ತಿದ್ದಾರೆ ಎಂದು ತುರ್ತು ಕಾರ್ಯಪಡೆ ಸಭೆಯ ನಂತರ ಪ್ರಧಾನಿ ಫುಮಿಯೊ ಕಿಶಿಡಾ ತಿಳಿಸಿದ್ದಾರೆ.
2011 ರಲ್ಲೂ ಈಶಾನ್ಯ ಜಪಾನ್‌ನಲ್ಲಿ 9.0 ತೀವ್ರವಾದ ಸಮುದ್ರದೊಳಗಿನ ಭೂಕಂಪ ಸಂಭವಿಸಿತ್ತು. ಇದರಿಂದ ಸುನಾಮಿ ಉಂಟಾಗಿತ್ತು. ಪರಿಣಾಮವಾಗಿ ದೇಶದಲ್ಲಿ ಮೃತರು ಮತ್ತು ಕಾಣೆಯಾದವರ ಸಂಖ್ಯೆ ಸುಮಾರು 18,500 ಆಗಿತ್ತು. ಇದನ್ನೂ ಓದಿ: Japan Earthquakes; ಜಪಾನ್‌ನಲ್ಲಿ ಭೂಕಂಪಕ್ಕೆ 13 ಮಂದಿ ಸಾವು – ಒಂದೇ ದಿನ 155 ಬಾರಿ ಭೂಮಿ ಕಂಪನ