ಟೋಕಿಯೋ: ಜಪಾನಿನ (Japan) ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ (Tokyo’s Haneda Airport) ನಡೆದ ದುರ್ಘಟನೆಯಲ್ಲಿ ಐವರು ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ಬೆಳಕಿಗೆ ಬಂದಿದೆ.
Advertisement
ಮಂಗಳವಾರ ಜಪಾನ್ ಏರ್‌ಲೈನ್ಸ್ ಜೆಟ್ ಕೋಸ್ಟ್ ಗಾರ್ಡ್ (Coast Guard aircraft) ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ . ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಹೊಕ್ಕೈಡೊದಿಂದ ಟೇಕಾಫ್ ಆದ JAL 516 ವಿಮಾನವು ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ಹೊತ್ತಿ ಉರಿದಿದೆ. ಸದ್ಯ ವಿಮಾನ ಡಿಕ್ಕಿಯ ಬಳಿಕ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ವೀಡಿಯೋದಲ್ಲಿ ಹೊಗೆ ತುಂಬಿದ ಕ್ಯಾಬಿನ್‌ನೊಳಗೆ ಪ್ರಯಾಣಿಕರು ಅಳುತ್ತಿರುವುದು ಹಾಗೂ ಕೆಮ್ಮುತ್ತಲೇ ವಿಮಾನದಿಂದ ಹೊರಗೆ ಓಡಿಕೊಂಡು ಬರುತ್ತಿರುವುದನ್ನು ಗಮನಿಸಬಹುದಾಗಿದೆ. ಇದನ್ನೂ ಓದಿ: ಜಪಾನ್ ವಿಮಾನ ಅವಘಡ- ಕೋಸ್ಟ್ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ
Advertisement
Just IN:— A Japanese Airline plane, with 367 passengers onboard, is fully engulfed in fire after crash landing. pic.twitter.com/GcjubF5R0h
— South Asia Index (@SouthAsiaIndex) January 2, 2024
ಕೋಸ್ಟ್ ಗಾರ್ಡ್ ವಿಮಾನದಲ್ಲಿ ಆರು ಸಿಬ್ಬಂದಿ ಇದ್ದರು. ಅವಘಡದಿಂದಾಗಿ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಮಾನದ ಕ್ಯಾಪ್ಟನ್ ಸ್ಥಿತಿ ಗಂಭೀರವಾಗಿದೆ ಎಂದು ಟೋಕಿಯೊದ ಪೊಲೀಸ್ ಇಲಾಖೆಯು ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (NHK) ಗೆ ತಿಳಿಸಿದೆ. ಇನ್ನು ಈ ಸಂಬಂಧ ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯವು ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.