ಅಮರಾವತಿ: ಜನರ ಅಭಿಪ್ರಾಯಗಳನ್ನು ಕಡೆಗಣಿಸಿ ಜಿಲ್ಲೆ ವಿಭಜನೆ ಮಾಡಲಾಗಿದೆ ಎಂದು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವಿಭಜನೆಗೊಂಡ ಎರಡು ಹೊಸ ಪ್ರತ್ಯೇಕ ಜಿಲ್ಲೆಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲೆಗಳ ಮರುಸಂಘಟನೆಯ ಪ್ರಕ್ರಿಯೆಯಲ್ಲಿ ಆಡಳಿತಗಾರರು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸದೆ ಜಿಲ್ಲೆಯನ್ನು ವಿಭಜನೆ ಮಾಡಿದ್ದಾರೆ. ಸಿಎಂ ಜಗನ್ ಅವರು ಜನರ ಆಶೋತ್ತರಗಳು, ಹೊಸ ಜಿಲ್ಲೆಗಳಲ್ಲಿನ ಆಂತರಿಕ ಸಮಸ್ಯೆಗಳು ಮತ್ತು ಇತರ ನಿರ್ಬಂಧಗಳನ್ನು ಏಕೆ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ
Advertisement
Advertisement
ಅದೇ ರೀತಿ, ಜಿಲ್ಲೆಗಳ ಬಹುಕಾಲದ ಬೇಡಿಕೆಗಳ ಬಗ್ಗೆ ಸರಿಯಾದ ಅಧ್ಯಯನವೂ ಆಗಿಲ್ಲ. ಎಟಪಾಕ ಮತ್ತು ಕುಕುನೂರು ಜಿಲ್ಲೆಗಳ ಜನರು ಜಿಲ್ಲಾ ಕೇಂದ್ರಕ್ಕೆ ಬರಲು ಕನಿಷ್ಠ 300 ಕಿ.ಮೀ. ಅಂದರೆ ಜನಸಾಮಾನ್ಯರು ಮತ್ತು ಬಡ ದಲಿತ ಜನರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಕನಿಷ್ಠ 2-3 ದಿನಗಳು ಬೇಕಾಗುತ್ತದೆ. ದಿಕ್ಕು ತೋಚದಂತಿರುವ ಜಿಲ್ಲೆಗಳ ವಿಭಜನೆಯಿಂದ ಜನರಿಗೆ ಆಡಳಿತ ಹೇಗೆ ಹತ್ತಿರವಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
Advertisement
ಕಾಕಿನಾಡ ಜಿಲ್ಲಾ ಕೇಂದ್ರವಾಗಿದ್ದಾಗ ಮುಳುಗಡೆ ಜಿಲ್ಲೆಗಳ ಜನರು ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರು. ಜಿಲ್ಲೆಗಳ ಪುನರ್‍ವಿಂಗಡಣೆ ನಂತರವೂ ಅವರ ಸಂಕಷ್ಟ ಮುಂದುವರಿದಿದೆ ಎಂದು ಆರೋಪಿಸಿದರು. ರಂಪಚೋಡವರಂ ಅನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಗಿರಿಜನರ ಅಭಿಪ್ರಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ರಾಯಲಸೀಮೆ ಜನರ ಅಭಿಪ್ರಾಯವನ್ನು ಸಹ ಸರ್ಕಾರ ಪರಿಗಣಿಸಲಿಲ್ಲ. ಮದನಪಲ್ಲಿ, ಹಿಂದೂಪುರ ಮತ್ತು ಮಾರ್ಕಪುರಂನಲ್ಲಿ ಕೇಂದ್ರ ಕಚೇರಿ ಹೊಂದಿರುವ ಜಿಲ್ಲೆಗಳಿಗೆ ಬೇಡಿಕೆಗಳಿವೆ ಎಂದರು. ಇದನ್ನೂ ಓದಿ: ಸಕಾಲ ಯೋಜನೆಯಲ್ಲಿ ಶೀಘ್ರವೇ ತತ್ಕಾಲ್ ಸೇವೆ- ಬಿ.ಸಿ. ನಾಗೇಶ್
Advertisement
ಜಿಲ್ಲೆಯ ಪ್ರತ್ಯೇಕತೆಯ ಕರಡು ಅಧಿಸೂಚನೆ ಹೊರಡಿಸುವ ಮೊದಲು ಯಾವುದೇ ಚರ್ಚೆ ಆಗಿಲ್ಲ. ಜನರು ನೀಡಿದ ಜ್ಞಾಪನಾ ಪತ್ರವನ್ನೂ ಸಹ ಪರಿಗಣಿಸಿಲ್ಲ. ಜಿಲ್ಲಾ ಪುನರ್‍ಸಂಘಟನೆಯ ನ್ಯೂನತೆ ಮತ್ತು ಅನಾನುಕೂಲತೆಗಳ ವಿರುದ್ಧ ಜನರು ಆರಂಭಿಸಿರುವ ಪ್ರತಿಭಟನೆಗೆ ಜನಸೇನೆ ಬೆಂಬಲ ನೀಡಲಿದೆ ಎಂದರು. ಜನಸೇನಾ ತಪ್ಪುಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಜನರ ಅನುಕೂಲಕ್ಕಾಗಿ ಜಿಲ್ಲೆಗಳನ್ನು ಮರುಸಂಘಟಿಸುತ್ತದೆ ಎಂದು ನುಡಿದರು.