ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

Public TV
1 Min Read
kota srinivas poojary

ಉಡುಪಿ: ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಿಡಿಕಾರಿದರು.

ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ. ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೆಗೆಯಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ (Janivara Row) ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್

Janivara Row Bidar Student KEA

ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ ಜನಿವಾರ ತೆಗೆಸುವುದು ಸರಿನಾ? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.

ಮಂತ್ರಿಗಳೇ ನಿಮಗೆ ಗೊತ್ತಿಲ್ಲ ಅಂತೀರಿ. ತಪ್ಪು ಮಾಡಿದವರ ಮೇಲೆ ತಕ್ಷಣ ಕ್ರಮವಾಗಲಿ. ಒಂದು ಧರ್ಮದವರು ಏನು ಬೇಕಾದರೂ ಹಾಕಬಹುದಾ? ಮತ್ತೊಂದು ಧರ್ಮದವರು ಏನೂ ಹಾಕುವಂತಿಲ್ಲ ಅನ್ನೋದು ಸರಿಯಲ್ಲ. ಸಿಎಂ, ಗೃಹಮಂತ್ರಿಗಳು, ಶಿಕ್ಷಣ ಸಚಿವರು ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ಗರಂ ಆದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣ – ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ FIR

Share This Article