ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಜೊತೆ ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೇಡಿಸುತ್ತಿದ್ದಾರೆ.
Advertisement
ತಮ್ಮ ಬ್ಯುಸಿ ಶೆಡ್ಯೂಲ್ಗಳಿಂದ ಬ್ರೇಕ್ ಪಡೆದುಕೊಂಡು ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ.
Advertisement
Advertisement
ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಸಹೋದರಿ ಖುಷಿ “ವಾವ್” ಎಂದು ಕಾಮೆಂಟ್ ಮಾಡಿದರೆ, ನಟಿ ಕಿಯಾರಾ ಅಡ್ವಾಣಿ “ಉಫ್” ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಜಾನ್ವಿಯ ಚಿಕ್ಕಮ್ಮ ಮಹೀಪ್ ಕಪೂರ್ ಫೈರ್ ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್
Advertisement
ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.
ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?
View this post on Instagram
ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.