ಸೌತ್ ಸಿನಿರಂಗದಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ (Rashmika Mandanna) ನಟನೆಯ `ಪುಷ್ಪ’ (Pushpa) ಚಿತ್ರ ಹವಾ ಎಬ್ಬಿಸಿತ್ತು. ಈಗ `ಪುಷ್ಪ 2′ ಚಿತ್ರದ ಬ್ರೇಕಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಸಮಂತಾ ಬದಲು ಬಾಲಿವುಡ್ ನಟಿಯನ್ನ `ಪುಷ್ಪ 2′ ಟೀಮ್ ಕರೆತರುತ್ತಿದ್ದಾರೆ.
`ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಜೋಡಿ ಅದೆಷ್ಟು ಕಮಾಲ್ ಮಾಡಿತ್ತೋ ಅದೇ ರೀತಿ ಸಮಂತಾ ಡ್ಯಾನ್ಸ್ ರಂಗೇರಿತ್ತು. ಇದೀಗ ಪಾರ್ಟ್ 2ಗೆ (Pushpa 2) ಮುಹೂರ್ತ ಫಿಕ್ಸ್ ಆಗಿದೆ. ಇದರಲ್ಲೂ ಐಟಂ ಡ್ಯಾನ್ಸ್ ಇರಲಿದೆ. ಸಮಂತಾ ಬದಲು ನಟಿ ಜಾನ್ವಿ ಕಪೂರ್, (Janvi Kapoor) ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ. ಇದನ್ನೂ ಓದಿ: ಹನ್ಸಿಕಾ ಮದುವೆಗೆ ಕೌಂಟ್‌ಟೌನ್: ಜೈಪುರಗೆ ಹಾರಿದ ʻಬಿಂದಾಸ್ʼ ನಟಿ
ಸಮಂತಾ (Samantha) ಐಟಂ ಡ್ಯಾನ್ಸ್ ಬಂಪರ್ ರೆಸ್ಪಾನ್ಸ್ ಸಿಕ್ಕಿತ್ತು. `ಪುಷ್ಪ 2’ನಲ್ಲಿ ಬದಲಾವಣೆ ಇರಲಿ ಅಂತಾ ಸಮಂತಾ ಬದಲು ಜಾನ್ವಿ ಕಪೂರ್ ಅವರಿಗೆ ಮಣೆ ಹಾಕಿದ್ದಾರೆ. ಸಮಂತಾ ಬದಲು ಈ ಬಾರಿ ಅಲ್ಲು ಜೊತೆ ಜಾನ್ವಿ ಕುಣಿದು ಕುಪ್ಪಳಿಸಲಿದ್ದಾರೆ.