ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಬಾಯಿಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದೇವರ 2’ ಸಿನಿಮಾದಲ್ಲಿನ ನಟಿಯ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಬಿಗ್ ಅಪ್‌ಡೇಟ್ ಹಂಚಿಕೊಂಡಿದೆ.
‘ದೇವರ 2’ನಲ್ಲಿ ಹಳ್ಳಿಯ ಹುಡುಗಿಯ ಲುಕ್‌ನಲ್ಲಿ ಮಿಂಚಿದ್ದಾರೆ. ಬಾಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಜನುಮ ದಿನದ ಪ್ರಯುಕ್ತ ಫ್ಯಾನ್ಸ್‌ಗೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಜೊತೆಗೆ ಈ ಸಿನಿಮಾದ ಪಾರ್ಟ್ 2 ಬರಲ್ಲ ಎಂದವರಿಗೆ ನಟಿಯ ಪೋಸ್ಟರ್ ರಿಲೀಸ್ ಮಾಡಿ ಬಾಯಿ ಮುಚ್ಚಿಸಿದ್ದಾರೆ.
View this post on Instagram
ಇನ್ನೂ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ತಾರಕ್ ಜೊತೆ ಜಾನ್ವಿ ಮಿಂಚಿದ್ದರು. ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದರು. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್
ಇನ್ನೂ ಪರಮ ಸುಂದರಿ, ರಾಮ್ ಚರಣ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಜಾನ್ವಿ ಕಪೂರ್ ಕೈಯಲ್ಲಿವೆ.