Connect with us

Bengaluru City

ನವೆಂಬರ್ 19ರಂದು ಜನಾರ್ದನ ರೆಡ್ಡಿಗೆ ರಾಜಯೋಗ – ಮತ್ತೆ ಶುಕ್ರದೆಸೆ ಶುರುವಾಯ್ತಾ?

Published

on

ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಗೆ ಮತ್ತೆ ಶುಕ್ರದೆಸೆ ಶುರುವಾಗಿದ್ದು, ರಾಜಯೋಗದಿಂದ ರೆಡ್ಡಿ ರಾಜ್ಯವನ್ನು ಆಳುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳಿದೆ ಎನ್ನಲಾಗಿದೆ.

ಆಂಬಿಡೆಂಡ್ ಕಂಪೆನಿ ವಂಚನೆ ಪ್ರಕರಣದಿಂದ ಬೇಸತ್ತಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇದೇ ತಿಂಗಳು 19ರಂದು ರಾಜಯೋಗ ಹಿನ್ನೆಲೆಯಲ್ಲಿ ಅಂದು ಮಹಾಯಾಗಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ವಿಘ್ನ ನಿವಾರಕ ಗಣೇಶನ ಹೆಸರಿನಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯಲಿದೆ. ಮಹಾಯಾಗ ನಡೆಯುವ ದಿನ ಮಗಳ ಮದುವೆಯ ಎರಡನೇ ವಾರ್ಷಿಕೋತ್ಸವ ಕೂಡ ಇದೆ.

ಜನಾರ್ದನ ರೆಡ್ಡಿ ಅತೀ ಹೆಚ್ಚಾಗಿ ದೇವರ ಪೂಜೆ ಮಾಡುತ್ತಾರೆ. ಜೊತೆಗೆ ಜ್ಯೋತಿಷ್ಯವನ್ನು ನಂಬುತ್ತಾರೆ. ಆದ್ದರಿಂದ ಜಾಮೀನು ಸಿಕ್ಕಮೇಲೆ ಅವರೇ ಸ್ವತಃ ಇನ್ನು ಮೂರು ದಿನಗಳ ಬಳಿಕ ನಮ್ಮ ನಿವಾಸದಲ್ಲಿ ಹೋಮ-ಹವನ ಮಾಡಿಸುತ್ತೇನೆ. ನಂತರ ನಮಗೆ ರಾಜಯೋಗ ಶುರುವಾಗುತ್ತದೆ. ಮೂರುದಿನಗಳ ನಂತರ ನಮ್ಮನ್ನು ಯಾರು ಟಚ್ ಕೂಡ ಮಾಡುವುದಕ್ಕೆ ಆಗಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಈ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ನಾನು ಜನಾರ್ದನ ರೆಡ್ಡಿಯವರ ಜಾತಕವನ್ನು ಪರಿಶೀಲನೆ ಮಾಡಿಲ್ಲ. ರಾಜಯೋಗ ಅವರ ರಾಶಿ, ನಕ್ಷತ್ರದ ಅನುಗುಣವಾಗಿ ಆಯಾ ಕಾಲಕ್ಕೆ ಬರುತ್ತದೆ ಎಂಬುದನ್ನು ಪ್ರಮಾಣಿಕರಿಸಿ ನೋಡಲಾಗುತ್ತದೆ. ಹಿರಿಯರು ಹೇಳಿದಂತೆ ಮೂರಕ್ಕೆ ಮುಕ್ತಾಯ ಎಂಬಂತೆ ಮೂರು ಬಾರಿ ಜೈಲು ವಾಸದ ಬಳಿಕ ಜನಾರ್ದನ ರೆಡ್ಡಿಯ ಕಷ್ಟದ ದಿನಗಳು ಮುಗಿಯುತ್ತದೆ ಎಂದು ಹೇಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *