ಬಾಗಲಕೋಟೆ: ಜಿಲ್ಲೆಯ ಮುಧೋಳ ಪಟ್ಟಣದ ದುರ್ಗಾದೇವಿ ಜಾತ್ರಾ ನಿಮಿತ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ `ಹಾಲಿ ಶಾಸಕರು’ ಬೋರ್ಡ್ ಇರುವ ಕಾರಿನಿಂದ ಮೂಲಕ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮುಧೋಳ ಪಟ್ಟಣದಲ್ಲಿ ದುರ್ಗಾ ದೇವೆ ಜಾತ್ರೆಯ ಪ್ರಯುಕ್ತ ಇಂದು ಎತ್ತಿನಗಾಡಿ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಜನಾರ್ದನ ರೆಡ್ಡಿಯವರು ಚಾಲನೆ ನೀಡಿದ್ದರು.
ಹಾಲಿ ಶಾಸಕರು ನಾಮಫಲಕವಿರುವ ಕಾರಿನಲ್ಲಿ ಜನಾರ್ದನ ರೆಡ್ಡಿ ಆಗಮಿಸಿದ್ದರು. ರೆಡ್ಡಿಯವರ ಕಾರು ಬರುತ್ತಿದ್ದಂತೆ ಕ್ಷಣಕಾಲ ಜನ ಕಣ್ಣರಳಿಸಿ ನೋಡಿದರು.
ಕಾರಿನ ನಾಮಫಲಕ ನೋಡಿದ ಜನರು ರೆಡ್ಡಿಯವರು ಯಾವ ಕ್ಷೇತ್ರದ ಶಾಸಕ? ಅಲ್ಲದೇ ಕಾರಿನಲ್ಲಿ ಶಾಸಕರಲ್ಲದಿದ್ದರೂ ಕಾರಿನ ಮೇಲೆ ಶಾಸಕರು ಎಂಬ ನಾಮಫಲಕ ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಜನಾರ್ದನರೆಡ್ಡಿ ಶಾಸಕರ ನಾಮಫಲಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv