ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದು ವಿಶೇಷ ಸ್ಥಾನಮಾನ ಅನುಚ್ಛೇದ 370ನ್ನು ತೆಗೆದು ಹಾಕಲಾಗಿದೆ. ಮುಂಜಾಗ್ರತ ಕ್ರಮವಾಗಿ ಕಾಶ್ಮೀರದಲ್ಲಿ ವಿಶೇಷ ಬಂದೋಬಸ್ತ್, ಕರ್ಪ್ಯೂ ವಿಧಿಸಲಾಗಿತ್ತು. ಸದ್ಯ ಕಾಶ್ಮೀರಿಗರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಆರ್ಟಿಕಲ್ 370ರ ರದ್ದು ಬಳಿಕ ಕಾಶ್ಮೀರದ 575 ಯುವಕರು ಭಾರತೀಯ ಸೇನೆ ಸೇರ್ಪಡೆಗೊಂಡಿದ್ದಾರೆ.
ಶುಕ್ರವಾರ ರೆಜಿಮೆಂಟ್ ಸೆಂಟರ್ ನಲ್ಲಿ ಪಾಸಿಂಗ್ ಔಟ್ ಪರೇಡ್ ಅಯೋಜಿಸಲಾಗಿತ್ತು. ಈ ಪರೇಡ್‍ನಲ್ಲಿ 575 ಯುವಕರು ಭಾಗಿಯಾಗಿದ್ದು, ಎಲ್ಲರೂ ಸೆಂಟರ್ ಸೇರ್ಪಡೆಯಾಗಿದ್ದಾರೆ. ಪರೇಡ್ ನಲ್ಲಿ ಭಾಗಿಯಾಗಿದ್ದ ಕಾಶ್ಮೀರದ ವಸೀಮ್ ಅಹ್ಮದ್ ಮಾತನಾಡಿ, ನನ್ನ ತಂದೆ ಸೇನೆಯಲ್ಲಿದ್ದರು. ತಂದೆಯ ಸಮವಸ್ತ್ರದಿಂದ ಸಿಕ್ಕ ಪ್ರೇರಣೆಯಿಂದಾಗಿ ನಾನು ಸೇನೆ ಸೇರುವ ನಿರ್ಧಾರಕ್ಕೆ ಬಂದೆ. ಇಂದು ತುಂಬಾ ಖುಷಿಯಾಗಿದ್ದೇನೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.
Advertisement
Advertisement
ಮಿರ್ ಎಂಬವರು ಮಾತನಾಡಿ, ನನ್ನ ತಂದೆ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಂದೆಯ ಪ್ರೇರಣೆಯಿಂದಾಗಿ ಸೇನೆ ಸೇರಿದ್ದೇನೆ. ಸೇನೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಕಲಿಯುವ ಅವಕಾಶ ಸಿಗುತ್ತದೆ. ನಾನು ಸೇನೆ ಸೇರಿದ್ದರಿಂದ ಪೋಷಕರು ಹೆಮ್ಮೆ ಪಡುತ್ತಿದ್ದಾರೆ ಎಂದು ತಿಳಿಸಿದರು.